ಉದಧಿಯಲಿ ನದಿನದಗಳುದಕ ಭೇದಗಳೈಕ್ಯ |
ಬದುಕಿನಲಿ ಮತ(ರೀತಿ)ಭೇದಂಗಳೈಕ್ಯ ||
ಸಮದಲಾತ್ಮದೊಳೆಲ್ಲ ಲೋಕಭೇದಗಳೈಕ್ಯ |
ಇದಿರಿಗಿಹುದೇಕಾತ್ಮ - ಮರುಳ ಮುನಿಯ || (೪೨)
(ನದಿನದಗಳಾ+ಉದಕ)(ಭೇದಗಳೂ+ಐಕ್ ಯ)(ಭೇದಂಗಳೂ+ಐಕ್ಯ)(ಸಮದಲ+ಆತ್ಮ ದ+ಒಳು+ಎಲ್ಲ)(ಲೋಕಭೇದಗಳು+ಐಕ್ಯ )(ಇದಿರಿಗೆ+ಇಹುದು+ಏಕಾತ್ಮ)
ಹೆಣ್ಣು ನದಿ ಮತ್ತು ಗಂಡು ನದಿ(ನದ)ಗಳ ನೀರು(ಉದಕ)ಗಳ ವ್ಯತ್ಯಾಸಗಳು (ಭೇದಗಳು) ಅವು ಸಮುದ್ರ (ಉಧದಿ)ವನ್ನು ಸೇರಿದ ತಕ್ಷಣ ಮರೆಯಾಗಿ ಹೋಗುತ್ತವೆ. ಹಾಗೆಯೇ ನಮ್ಮ ದಿನನಿತ್ಯದ ಜೀವನದಲ್ಲಿಯೂ ಸಹ ವಿಧವಿಧವಾದ ವಿಚಾರ ಮತ್ತು ರೀತಿಗಳ ವ್ಯತ್ಯಾಸಗಳು ಸಮರಸಗೊಳ್ಳುತ್ತವೆ. ನಿರ್ಮಲ ಮತ್ತು ಪವಿತ್ರ(ಸಮದಲ)ವಾಗಿರುವ ಆತ್ಮದ ಒಳಗೆ ಈ ಪ್ರಪಂಚದ ವ್ಯತ್ಯಾಸಗಳೆಲ್ಲವೂ ಒಂದಾಗಿಹೋಗುತ್ತವೆ. ನಮ್ಮಗಳ ಎದುರಿನಲ್ಲಿ (ಇದಿರಿಗೆ) ಇರುವುದು ಭೇಧವಿಲ್ಲದ ಒಂದೇ ಒಂದು (ಏಕ) ಆತ್ಮ, ಅದು ಪರಮಾತ್ಮ.
ಬದುಕಿನಲಿ ಮತ(ರೀತಿ)ಭೇದಂಗಳೈಕ್ಯ ||
ಸಮದಲಾತ್ಮದೊಳೆಲ್ಲ ಲೋಕಭೇದಗಳೈಕ್ಯ |
ಇದಿರಿಗಿಹುದೇಕಾತ್ಮ - ಮರುಳ ಮುನಿಯ || (೪೨)
(ನದಿನದಗಳಾ+ಉದಕ)(ಭೇದಗಳೂ+ಐಕ್
ಹೆಣ್ಣು ನದಿ ಮತ್ತು ಗಂಡು ನದಿ(ನದ)ಗಳ ನೀರು(ಉದಕ)ಗಳ ವ್ಯತ್ಯಾಸಗಳು (ಭೇದಗಳು) ಅವು ಸಮುದ್ರ (ಉಧದಿ)ವನ್ನು ಸೇರಿದ ತಕ್ಷಣ ಮರೆಯಾಗಿ ಹೋಗುತ್ತವೆ. ಹಾಗೆಯೇ ನಮ್ಮ ದಿನನಿತ್ಯದ ಜೀವನದಲ್ಲಿಯೂ ಸಹ ವಿಧವಿಧವಾದ ವಿಚಾರ ಮತ್ತು ರೀತಿಗಳ ವ್ಯತ್ಯಾಸಗಳು ಸಮರಸಗೊಳ್ಳುತ್ತವೆ. ನಿರ್ಮಲ ಮತ್ತು ಪವಿತ್ರ(ಸಮದಲ)ವಾಗಿರುವ ಆತ್ಮದ ಒಳಗೆ ಈ ಪ್ರಪಂಚದ ವ್ಯತ್ಯಾಸಗಳೆಲ್ಲವೂ ಒಂದಾಗಿಹೋಗುತ್ತವೆ. ನಮ್ಮಗಳ ಎದುರಿನಲ್ಲಿ (ಇದಿರಿಗೆ) ಇರುವುದು ಭೇಧವಿಲ್ಲದ ಒಂದೇ ಒಂದು (ಏಕ) ಆತ್ಮ, ಅದು ಪರಮಾತ್ಮ.
No comments:
Post a Comment