Thursday, August 28, 2014

ಎನ್ನ ಹಣವೆನ್ನ ಹೆಸರೆನ್ನ ಮನೆಯೆನ್ನ ಜನ (656)

ಎನ್ನ ಹಣವೆನ್ನ ಹೆಸರೆನ್ನ ಮನೆಯೆನ್ನ ಜನ - |
ವೆನ್ನುತ್ತಲನ್ಯರದು ಬೇರಿಹುದೆನುತ್ತೆ ||
ಭಿನ್ನಗೊಳಿಸಿಬ್ಭಾಗ ಲೋಕವನು ಮಾಡುವುದು |
ಪುಣ್ಯಪದವಲ್ಲವದು - ಮರುಳ ಮುನಿಯ || (೬೫೬)

(ಜನ+ಎನ್ನುತ್ತಲ್+ಅನ್ಯರ್+ಅದು)(ಬೇರೆ+ಇಹುದು+ಎನುತ್ತೆ)(ಭಿನ್ನಗೊಳಿಸಿ+ಇಬ್ಭಾಗ)(ಪುಣ್ಯಪದ+ಅಲ್ಲ+ಅದು)

ಇದು ನನ್ನ ಸಂಪತ್ತು, ನಾನು ಗಳಿಸಿದ ಹೆಸರು, ನನ್ನ ಮನೆ ಮತ್ತು ಇವರೆಲ್ಲರೂ ನನ್ನ ಜನಗಳು ಮತ್ತು ಮಿಕ್ಕಿದುದೆಲ್ಲಾ ಬೇರೆಯವರೆಂದು, ಭೇದ ಭಾವ ಮಾಡಿ ಜಗತ್ತನ್ನು ಭಿನ್ನಗೊಳಿಸುವುದು ಪುಣ್ಯಮಾರ್ಗವಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Saying ‘My money, my name, my house and my people’
You exclude others and distance them away,
Thus you divide the whole world into two,
This is not righteous – Marula Muniya (656)
(Translation from "Thus Sang Marula Muniya" by Sri. Narasimha Bhat)

Wednesday, August 27, 2014

ದ್ರುತತೆಯುಂ ದೃಢತೆಯುಂ ಕೂಡೆ ರಥಪಯಣ ಸುಖ (655)

ದ್ರುತತೆಯುಂ ದೃಢತೆಯುಂ ಕೂಡೆ ರಥಪಯಣ ಸುಖ |
ಹಿತವಂತು ಜನಕೆ ಲೋಕವ್ಯವಸ್ಥೆಯಲಿ ||
ಜೊತೆಗೂಡೆ ಸಹಜ ವಿಕಸನೆ ಶಾಸನದ ನಿಯತಿ |
ಮಿತಮುಭಯಮಿರೆ ಧರ್ಮ - ಮರುಳ ಮುನಿಯ || (೬೫೫)

(ಹಿತ+ಅಂತು)(ಮಿತಂ+ಉಭಯಂ+ಇರೆ)

ವೇಗ (ದ್ರುತತೆ)ವಾಗಿರುವುದು ಮತ್ತು ನಿಶ್ಚಲತೆಯಿಂದಿರುವುದೆರಡೂ ಸೇರಿದರೆ ರಥದ ಪ್ರಯಾಣವು ಸುಖಕರವಾಗಿರುತ್ತದೆ. ಲೋಕದ ಆಡಳಿತ ನಡೆಸುವ ಏರ್ಪಾಟಿನಲ್ಲೂ ಸಹಜ ಪ್ರಗತಿಯ ಜತೆಗೆ, ಶಾಸನದ ಕಟ್ಟುಪಾಡುಗಳು ಸೇರಿಕೊಂಡರೆ ಜನಗಳಿಗೆ ಒಳ್ಳೆಯದಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Car ride becomes comfortable when speed and stability complement each other
This is good to all beings even in the management of worldly affairs.
Dharma it is when natural development and rule of law
Are balanced in moderate measures – Marula Muniya
(Translation from "Thus Sang Marula Muniya" by Sri. Narasimha Bhat)

Tuesday, August 26, 2014

ಅಮನಸ್ಕನಾಗು ನೀಂ ಮಮತೆಯೆಲ್ಲವ ನೀಗು (654)

ಅಮನಸ್ಕನಾಗು ನೀಂ ಮಮತೆಯೆಲ್ಲವ ನೀಗು |
ಭ್ರಮಣೆಯ ಪುರದ್ವಂದ್ವವೀಥಿಯಲಿ ಸಾಗು ||
ಅಮಲ ಸತ್ತ್ವಾಂಬುಧಿಯ ವಿಮಲ ವೀಚೀತಲ- |
ಸ್ತಿಮಿತ ಜಲದೊಡಲಲಿರು - ಮರುಳ ಮುನಿಯ || (೬೫೪)

(ಅಮನಸ್ಕನ್+ಆಗು)(ಸತ್ತ್ವಾ+ಅಂಬುಧಿಯ)(ಜಲದ+ಒಡಲಲಿ+ಇರು)

ನೀನು ಮನೋವ್ಯಾಪಾರವಿಲ್ಲದವನ(ಅಮನಸ್ಕ)ಂತಾಗು. ಸ್ವಾರ್ಥ, ಮೋಹ ಮತ್ತು ಅಹಂಕಾರಗಳನ್ನು ಕಳೆದುಕೊ. ಮಂಕುಗೊಳಿಸುವ ಜಟಿಲತೆಯಿಂದ ಕೂಡಿರುವ ಪೇಟೆ ಹಾದಿಯಲ್ಲಿ ನಡೆ. ಸ್ವಚ್ಛ(ಅಮಲ)ವಾಗಿರುವ ಸಾರದ ಸಮುದ್ರ(ಅಂಬುಧಿ)ದ ಪವಿತ್ರವಾದ (ವಿಮಲ) ಅಲೆ(ವೀಚಿ)ಗಳ ತಳಭಾಗದ ನಿಶ್ಚಲ(ಸ್ತಿಮಿತ)ವಾಗಿರುವ ನೀರಿನ ಒಡಲಿನಲ್ಲಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be waveless in mind and renounce all attachments,
Walk on the city streets of duality and complete your tour,
Rest in the calm bosom of the pure ocean of all virtuous qualities
Deep under the blemishlesss waves – Marula Muniya
(Translation from "Thus Sang Marula Muniya" by Sri. Narasimha Bhat)

Monday, August 25, 2014

ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು (653)

ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು |
ಜೀವಿತದ ಮಿಕ್ಕೆಲ್ಲಮಂ ತಿಳಿಯಲಹುದೋ ||
ಆ ವಿದ್ಯೆಯಂ ಗಳಿಸು ಮೊದಲೆಲ್ಲಕಿಂತಲದು |
ದೀವಿಗೆಯೊ ಬಾಳಿರುಳ್ಗೆ - ಮರುಳ ಮುನಿಯ || (೬೫೩)

(ತಿಳಿಯಲ್+ಅಹುದೋ)(ಮೊದಲ್+ಎಲ್ಲಕಿಂತಲ್+ಅದು)(ಬಾಳ್+ಇರುಳ್ಗೆ)

ನೀನು ಯಾವ ಒಂದು ವಸ್ತುವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವೆಯಾದರೆ, ಜೀವನದಲ್ಲಿರುವ ಮಿಕ್ಕೆಲ್ಲ ವಸ್ತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೋ, ಬೇರೆ ಏನನ್ನಾದರೂ ಕಲಿಯುವುದಕ್ಕಿಂತ ಮೊದಲು, ಆ ವಿದ್ಯೆಯನ್ನು ಸಂಪಾದಿಸು. ಅದು ನಿನ್ನ ಜೀವನದ ರಾತ್ರಿಗೆ(ಇರುಳ್) ದೀಪ(ದೀವಿಗೆ)ವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There is one thing by knowing which in full,
One can know all other things of life.
Acquire that knowledge as it is more important than all else,
It is light for the night of life - Marula Muniya (653)
(Translation from "Thus Sang Marula Muniya" by Sri. Narasimha Bhat)

Friday, August 22, 2014

ನೆಲವರ್ಧ ಜಲವರ್ಧ ಸೇರಲೀ ಭೂಗೋಳ (652)

ನೆಲವರ್ಧ ಜಲವರ್ಧ ಸೇರಲೀ ಭೂಗೋಳ |
ತಲೆಯರ್ಧವೆದೆಯರ್ಧ ಮನುಜ ಸಂಸಾರ ||
ನಲಿವರ್ಧವಳಲರ್ಧ ಮನುಜ ಜೀವಿತಸಾರ |
ಕಲಿತಿದನು ಬಾಳೆಲವೊ - ಮರುಳ ಮುನಿಯ || (೬೫೨)

(ತಲೆ+ಅರ್ಧ+ಎದೆ+ಅರ್ಧ)(ನಲಿವು+ಅರ್ಧ+ಅಳಲು+ಅರ್ಧ)

ನಾವು ವಾಸಿಸುತ್ತಿರುವ ಪ್ರಪಂಚವು ಅರ್ಧ ನೆಲ ಮತ್ತು ಅರ್ಧ ನೀರಿನಿಂದ ಕೂಡಿಕೊಂಡಿದೆ. ಮನುಷ್ಯನ ಸಂಸಾರವಾದರೋ ಅರ್ಧ ಬುದ್ಧಿಶಕ್ತಿ ಮತ್ತು ಅರ್ಧ ಹೃದಯವನ್ನವಲಂಬಿಸಿ ಸಾಗುತ್ತದೆ. ಮನುಷ್ಯನ ಬಾಳುವೆಯ ತಿರುಳು ಅರ್ಧ ಸಂತೋಷ ಮತ್ತು ಅರ್ಧ ದುಃಖಗಳನ್ನೊಳಗೊಂಡಿದೆ. ನೀನು ಇದನ್ನು ಅರಿತುಕೊಂಡು ನಿನ್ನ ಜೀವನವನ್ನು ಸಾಗಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Half of this world is earth and the other half is water,
Half of humanity is strong in head and the other half is strong in heart,
Half of human life-substance is happiness and the other half is sorrow,
Learn this and live well – Marula Muniya (652)
(Translation from "Thus Sang Marula Muniya" by Sri. Narasimha Bhat)

Thursday, August 21, 2014

ಪೌರುಷಪರೀಕ್ಷೆ ನಿತ್ಯದ ಕೃತ್ಯ ದೈವಕ್ಕೆ (651)

ಪೌರುಷಪರೀಕ್ಷೆ ನಿತ್ಯದ ಕೃತ್ಯ ದೈವಕ್ಕೆ- |
ದಾರನುಮದೆಂದುಮದು ಶೋಧಿಸದೆ ಬಿಡದು ||
ದಾರುಣದಿನೋ ವಾರುಣಿಯಿನೋ ಎಂತೊ ಅದು |
ಧೀರತೆಯ ಪರಿಕಿಪುದು - ಮರುಳ ಮುನಿಯ || (೬೫೧)

(ದೈವಕ್ಕೆ+ಅದು+ಆರನುಂ+ಅದು+ಎಂದುಂ+ಅದು)

ಮನುಷ್ಯನ ಪೌರುಷವನ್ನು ಪರೀಕ್ಷೆಗಳಿಗೊಳಪಡಿಸುವುದು ದೈವದ ಪ್ರತಿನಿತ್ಯದ ಕೆಲಸ. ಅದು ಎಂದೆಂದಿಗೂ ಮತ್ತು ಯಾರನ್ನೂ ಪರೀಕ್ಷೆಗೆ ಒಳಗಾಗಿಸದೆ ಬಿಡದು. ಕ್ರೌರ್ಯ(ದಾರುಣ)ದಿಂದಲೋ ಅಥವಾ ಮತ್ತೇರಿಸುವ ಪದಾರ್ಥಗಳಿಂದಲೋ(ವಾರುಣಿ) ಹೇಗಾದರೂ ಸರಿ ಅದು ಅವನ ಧೈರ್ಯ ಮತ್ತು ದಿಟ್ಟತವವನ್ನು ಪರೀಕ್ಷಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Testing human valour is a daily routine to Fate
He would never exempt anyone but would always test every one,
Torturing or intoxicating or somehow,
He would never rest till He tests human valour – Marula Muniya (651)
(Translation from "Thus Sang Marula Muniya" by Sri. Narasimha Bhat)

Wednesday, August 20, 2014

ನರಕೃತ್ಯವೇಂ ನಶ್ಯ ಕಾಲವಶ್ಯವದೆಂಬ (650)

ನರಕೃತ್ಯವೇಂ ನಶ್ಯ ಕಾಲವಶ್ಯವದೆಂಬ |
ಕೊರಗಿಂದಲೆದೆ ಕುಗ್ಗಿ ಜೀವ ಕುಸಿವಂದು ||
ಸ್ಮರಿಸಾದಿಯಿಂ ಜಗದೊಳೆಡೆಬಿಡದೆ ಪರಿಯುತಿಹ |
ಪುರುಷತಾವಾಹಿನಿಯ - ಮರುಳ ಮುನಿಯ || (೬೫೦)

(ಕಾಲವಶ್ಯ+ಅದು+ಎಂಬ)(ಕೊರಗಿಂದಲ್+ಎದೆ)(ಸ್ಮರಿಸು+ಆದಿಯಿಂ)(ಜಗದ+ಒಳು+ಎಡೆಬಿಡದೆ)()

ಮನುಷ್ಯನ ಕೃತಿಗಳೆಲ್ಲವೂ ನಾಶವಾಗಿ ಹೋಗುವಂತಹುವು ಮತ್ತು ಅದು ಕಾಲನ ಅಧೀನದಲ್ಲಿರುವುದೆಂಬ ದುಃಖದಿಂದ ಹೃದಯ ಅಲುಗಾಡಿ ಕುಗ್ಗಿಹೋಗಿ ಜೀವವು ಕುಸಿದು ಬೀಳುವಂತಾದಾಗ, ಜಗತ್ತಿನಲ್ಲಿ ಮೊದಲಿನಿಂದಲೂ ನಿರಂತರವಾಗಿ ಹರಿಯುತ್ತಿರುವ ಪುರುಷತ್ವದ ಪ್ರವಾಹ(ವಾಹಿನಿ)ದ ಬಗ್ಗೆ ಚಿಂತಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When you become disheartened and when your soul sinks down
Bemoaning that human achievements are short-lived and subject to Time’s onslaught
Invoke the ceaseless torrent of heroism flowing in the world,
From time immemorial – Marula Muniya (650)
(Translation from "Thus Sang Marula Muniya" by Sri. Narasimha Bhat)

Tuesday, August 19, 2014

ಜಗದ ಕಡಲಿನ ನಡುವೆ ನಗವಾಗಿ ನೀಂ ನಿಲ್ಲು (649)

ಜಗದ ಕಡಲಿನ ನಡುವೆ ನಗವಾಗಿ ನೀಂ ನಿಲ್ಲು |
ನಗುವಹುದು ಸುತ್ತಲಿನ ತೆರೆಮೊರೆತವಂದು ||
ಭಗವಂತನದು ಲೋಕ ನಮದಲ್ಲವೆನೆ ಜನತೆ |
ಹಗೆವರೆಂತವರಿವರು? - ಮರುಳ ಮುನಿಯ || (೬೪೯)

(ನಗು+ಅಹುದು)(ತೆರೆಮೊರೆತವು+ಅಂದು)(ನಮದು+ಅಲ್ಲ+ಎನೆ)(ಹಗೆವರು+ಎಂತು+ಅವರ್+ಇವರು)

ಜಗತ್ತೆಂಬ ಸಮುದ್ರದ ಮಧ್ಯದಲ್ಲಿ ನೀನು ಒಂದು ಬೆಟ್ಟ(ನಗ)ದಂತೆ ನಿಂತುಕೊ. ಸುತ್ತಲೂ ಇರುವ ಅಲೆಗಳ ಭೋರ್ಗರೆಯುವ ಧ್ವನಿಗಳು ಆವಾಗ ನಿನಗೆ ನಗುವಾಗಿ ಕೇಳಿಸುತ್ತದೆ. ಇದು ಪರಮಾತ್ಮನ ಲೋಕ, ನಮ್ಮದಲ್ಲವೆಂದು ಜನಗಳು ಹೇಳಿದರೆ, ಅವರು ಒಬ್ಬೊರನ್ನೊಬ್ಬರು ಹೇಗೆ ತಾನೇ ದ್ವೇಷಿಸುತ್ತಾರೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Stand firm like the mountain in the midst of this ocean, the world
Then the roaring waves will be transformed into pearls of laughter,
“This World is not ours but it is God’s”, when people think so
How can they hate one another? – Marula Muniya
(Translation from "Thus Sang Marula Muniya" by Sri. Narasimha Bhat)

Monday, August 18, 2014

ನಿರವಧಿಯ ಕಾಲದಂಶವೆ ನಮ್ಮ ಘಟಿ ವಿಘಟಿ (648)

ನಿರವಧಿಯ ಕಾಲದಂಶವೆ ನಮ್ಮ ಘಟಿ ವಿಘಟಿ |
ಪರಬೊಮ್ಮನೊಂದಂಶ ಜೀವವಾದಂತೆ ||
ಧರೆಯರೆಕ್ಷಣದ ಬಾಳೆಲೆ ಬರಿದದೆನ್ನದಿರು |
ಕ್ಷರವೆ ಮುಖವಕ್ಷರಕೆ - ಮರುಳ ಮುನಿಯ || (೬೪೮)

(ಕಾಲದ+ಅಂಶವೆ)(ಪರಬೊಮ್ಮನ+ಒಂದು+ಅಂಶ)(ಜೀವವ+ಆದಂತೆ)(ಧರೆಯ+ಅರೆಕ್ಷಣದ)(ಮುಖ+ಅಕ್ಷರಕೆ)

ಅಳೆಯಲಿಕ್ಕೆ ಸಾಧ್ಯವಾಗದ ಕಾಲದ ಭಾಗವೇ ನಮ್ಮ ಕಾಲದ ಮಾಪನಗಳಾದ ೨೪ ನಿಮಿಷಗಳ ಘಟಕ (ಘಟಿ) ಮತ್ತು ೨೪ ಕ್ಷಣಗಳ ಘಟಕ (ವಿಘಟಿ). ಇದು ಪರಮಾತ್ಮನ ಒಂದು ಭಾಗವು ಜೀವವಾಗುವುದಕ್ಕೆ ಹೋಲಿಸಬಹುದು. ಭೂಮಿಯ (ಧರೆಯ) ಮೇಲಿನ ನಮ್ಮ ಒಂದು ಅರ್ಧಕ್ಷಣದ ಬಾಳು ಕೇವಲ ಶೂನ್ಯವೆನ್ನಬೇಡ. ಅಮರತ್ವದ (ಅಕ್ಷರ) ಮುಖವೇ ನಶ್ವರತೆ (ಕ್ಷರ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Our hours and minutes are parts of eternal time,
Just as our soul is a part of the Infinite God,
Say not that life in this world is momentary and hollow,
Ephemeral is the face of the Eternal – Marula Muniya
(Ephemeral: lasting for a very short time)
(Translation from "Thus Sang Marula Muniya" by Sri. Narasimha Bhat)

Friday, August 8, 2014

ಅಕ್ಷಯ್ಯವದು ನೋಡು ಲೋಕದಿತಿಹಾಸದಲಿ (647)

ಅಕ್ಷಯ್ಯವದು ನೋಡು ಲೋಕದಿತಿಹಾಸದಲಿ |
ಸಾಕ್ಷಿಗಳದೆಷ್ಟು ಜನರದರ ನಿತ್ಯತೆಗೆ |
ರಕ್ಷೆ-ಶಿಕ್ಷೆಗಳಿಂದ ಜೀವನವನುದ್ಧರಿಸೆ |
ದೀಕ್ಷೆ ತೊಟ್ಟವರ ನೆನೆ - ಮರುಳ ಮುನಿಯ || (೬೪೭)

(ಅಕ್ಷಯ್ಯ+ಅದು)(ಲೋಕದ+ಇತಿಹಾಸದಲಿ)(ಸಾಕ್ಷಿಗಳ್+ಅದು+ಎಷ್ಟು)(ಜನರ್+ಅದರ)(ಜೀವನವನು+ಉದ್ಧರಿಸೆ)

ಪ್ರಪಂಚದ ಚರಿತ್ರೆಯಲ್ಲಿ ಪೌರುಷವು ಅಕ್ಷಯ(ಅಕ್ಷಯ್ಯ)ವಾಗಿರುವುದನ್ನು ನೋಡು. ಅದು ಸದಾಕಾಲವೂ ಇರುವುದೆನ್ನುವದರ ಪುರಾವೆಗೆ ಎಷ್ಟು ಜನರಿದ್ದಾರೆ ನೋಡು. ಕಾಪಾಡುವುದು ಮತ್ತು ದಂಡಿಸುವುದರಿಂದ ಜೀವನವನ್ನು ಮೇಲಕ್ಕೆತ್ತಲು, ಶಪಥ ತೊಟ್ಟವರನ್ನು ಜ್ಞಾಪಿಸಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

See the history of the world and know that it is deathless
Innumerable are the witnesses who advocated its eternity
Remember those noble souls who pledged to save and redeem other lives
Protecting and punishing – Marula Muniya
(Translation from "Thus Sang Marula Muniya" by Sri. Narasimha Bhat)

Thursday, August 7, 2014

ಪ್ರಾರಭ್ದಕರ್ಮವೆಂದಾತ್ಮಘಾತನೆ ಬೇಡ (646)

ಪ್ರಾರಭ್ದಕರ್ಮವೆಂದಾತ್ಮಘಾತನೆ ಬೇಡ |
ಪ್ರಾರಭ್ದ ಕಥೆಯಿರ್ಕೆ ಸುತ್ತ ಗತಿನೋಡು ||
ಪೌರುಷಂ ನಿತ್ಯನವ ಸತ್ಯನವ ಚೈತನ್ಯ |
ಮೀರು ಪ್ರಾರಭ್ದವನು - ಮರುಳ ಮುನಿಯ || (೬೪೬)

(ಪ್ರಾರಭ್ದಕರ್ಮ+ಎಂದು+ಆತ್ಮಘಾತನೆ)

ಹಿಂದಿನ ಜನ್ಮದ ಕರ್ಮದ ಫಲಗಳೆಂದು ನಿನ್ನ ಆತ್ಮಹಾನಿ ಮಾಡಿಕೊಳ್ಳಬೇಡ. ಅವುಗಳ ಕಥೆಯು ಇದ್ದರೂ ಸಹ ನಿನ್ನ ಸುತ್ತಮುತ್ತಲಿನ ಅವಸ್ಥೆಗಳನ್ನು ನೋಡು. ಪ್ರತಿನಿತ್ಯವೂ ಹೊಸ, ಹೊಸ ಪರಾಕ್ರಮಗಳನ್ನು ಕಾಣುತ್ತೀಯೆ. ಹೊಸ ಶಕ್ತಿಗಳೂ ಸಹ ಹುಟ್ಟುತ್ತಿರುತ್ತವೆ. ನೀನು ನಿನ್ನ ಪ್ರಾಚೀನ ಕರ್ಮಗಳ ಫಲಗಳನ್ನು ದಾಟಿ ಮುಂದೆ ಹೋಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Inflict on injury on self, blaming the effect of past karma,
Leave the past karma to its lot and see the conditions around.
Human endeavour is an energy that is ever new and ever true
Flaunt it and rise above the past karma – Marula Muniya (646)
(Translation from "Thus Sang Marula Muniya" by Sri. Narasimha Bhat)

Wednesday, August 6, 2014

ಹಾಸ್ಯ ರಸಿಕನೊ ದೇವನದರಿಂದಲಿಂತವನ (645)

ಹಾಸ್ಯ ರಸಿಕನೊ ದೇವನದರಿಂದಲಿಂತವನ |
ವಿಶ್ವಮಾಗಿಹುದವನ ಕೃತಿಯಕಟವಿಕಟಂ ||
ಶಾಶ್ವತವದೇಕಿಂತಶಾಶ್ವತದ ರೂಪಿಂ ರ- |
ಹಸ್ಯದೊಳ್ ಮರೆಯದಿರು - ಮರುಳ ಮುನಿಯ ||

(ದೇವನ್+ಅದರಿಂದಲಿ+ಇಂತು+ಅವನ)(ವಿಶ್ವಂ+ಆಗಿ+ಇಹುದು+ಅವನ)(ಕೃತಿ+ಅಕಟ+ವಿಕಟಂ)(ಶಾಶ್ವತವು+ಅದು+ಏಕೆ+ಇಂತು+ಅಶಾಶ್ವತದ)

ಪರಮಾತ್ಮನು ಹಾಸ್ಯ ಮತ್ತು ಅಣಕ ಮಾಡುವುದರಲ್ಲಿ ರಸಾಸ್ವಾದವನ್ನು ಬಲ್ಲವನು. ಆದುದರಿಂದ ಅವನು ಸೃಷ್ಟಿಸಿದ ವಿಶ್ವವು ಈ ರೀತಿ ಅಸಂಬದ್ಧತೆ (ಅಕಟವಿಕಟ)ಯಿಂದ ಕೂಡಿದೆ. ಆದರೆ ಸ್ಥಿರವಾಗಿರದಿರುವ ಆಕಾರಗಳಲ್ಲಿ ಸ್ಥಿರರೂಪ ಹೇಗೆ ಕಾಣಿಸಿಕೊಳ್ಳುತ್ತದೆ. ರಹಸ್ಯವು ಅವ್ಯಕ್ತವಾಗಿರದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

God delights in fun and frolie and therefore,
His world is so grotesque and bizarre
But why is the Eternal this secretly playing
Assuming evanescent forms? – Marula Muniya (645)
(Translation from "Thus Sang Marula Muniya" by Sri. Narasimha Bhat)

Tuesday, August 5, 2014

ಜೀವನದ ವಿಸ್ತರಕೆ ಹೆಣ್ಣುಗಂಡಾವಶ್ಯ (644)

ಜೀವನದ ವಿಸ್ತರಕೆ ಹೆಣ್ಣುಗಂಡಾವಶ್ಯ |
ಭೂವಿಲಾಸದೊಳಿರ‍್ವರಾತ್ಮ ತಾಂ ಬೆಳೆಗುಂ ||
ಭಾವದನ್ಯೋನ್ಯದಿಂ ಬೇಳುವುದಾತ್ಮದ ರಾಜ್ಯ |
ಪಾವನವೊ ಜೀವಕ್ಕೆ - ಮರುಳ ಮುನಿಯ || (೬೪೪)

(ಹೆಣ್ಣು+ಗಂಡು+ಅವಶ್ಯ)(ಭೂವಿಲಾಸದೊಳ್+ಇರ‍್ವರ್+ಆತ್ಮ)(ಭಾವದ+ಅನ್ಯೋನ್ಯದಿಂ)(ಬೇಳುವುದು+ಆತ್ಮದ)

ಬಾಳು ವಿಸ್ತಾರವಾಗಿ ಹರಡಿಕೊಳ್ಳುವುದಕ್ಕೆ ಹೆಣ್ಣು ಮತ್ತು ಗಂಡುಗಳ ಭೇದವು ಅಗತ್ಯವಾಗಿ ಇರಬೇಕು. ಭೂಮಿಯು ವಿಹಾರದಲ್ಲಿ ಇವರಿಬ್ಬರ ಆತ್ಮಗಳು ತಾವಾಗಿ ತಾವೇ ವೃದ್ಧಿಯಾಗುತ್ತವೆ. ಪರಸ್ಪರ ಪ್ರೀತಿಯ ಸಂವೇದನೆಗಳಿಂದ ಅವುಗಳ ಆತ್ಮದ ರಾಜ್ಯವು ಬೆಳೆಯುತ್ತದೆ. ಇದು ಜೀವವನ್ನು ಪವಿತ್ರ(ಪಾವನ)ಗೊಳಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Essential are man and woman for the growth of life,
The souls of both would ripen in the worldly play,
The kingdom of self would expand in their emotional cordiality
This is a process of purification for the soul – Marula Muniya
(Translation from "Thus Sang Marula Muniya" by Sri. Narasimha Bhat)