Showing posts with label ದ್ವಂದ್ವ ತರ್ಕದಿನಾಚೆ ಶುಭ ಅಶುಭದಿಂದಾಚೆ. Show all posts
Showing posts with label ದ್ವಂದ್ವ ತರ್ಕದಿನಾಚೆ ಶುಭ ಅಶುಭದಿಂದಾಚೆ. Show all posts

Friday, May 6, 2011

ದ್ವಂದ್ವ ತರ್ಕದಿನಾಚೆ ಶುಭ ಅಶುಭದಿಂದಾಚೆ (5)

ದ್ವಂದ್ವ ತರ್ಕದಿನಾಚೆ ಶುಭ ಅಶುಭದಿಂದಾಚೆ |
ಇಂದ್ರಿಯ ಸ್ಪರ್ಶನದ ಸುಖ ದುಃಖದಾಚೆ ||
ಸಂದಿರ್ಪುದೊಂದು ದಶೆಯದು ನಿತ್ಯಸೌಖ್ಯದಶೆ |
ಎಂದುಮರಸದನು ನೀ -ಮರುಳ ಮುನಿಯ || (೫)

(ಎಂದುಮ್+ಅರಸು+ಅದನು)

ವಿರುದ್ಧ ಜಟಿಲ (ದ್ವಂದ್ವ) ತರ್ಕಗಳ ಆಚೆ, ಶುಭ ಮತ್ತು ಅಶುಭಗಳ ಆಚೆ ಮತ್ತು ನಮ್ಮ ಇಂದ್ರಿಯಗಳಿಗೆ ನಿಲುಕುವ ಸುಖ ಮತ್ತು ದುಃಖಗಳ ಆಚೆ, ಒಂದು ಸ್ಥಿತಿ(ದೆಶೆ)ಯು ಕೂಡಿಕೊಂಡಿದೆ. ಅದೇ ಸದಾ ನೆಮ್ಮದಿ, ಆರೋಗ್ಯ ಮತ್ತು ಸಂತೋಷದಿಂದಿರುವಂತಹ ಸ್ಥಿತಿ. ಎಂದೆಂದಿಗೂ ಆ ಸ್ಥಿತಿಯನ್ನು ನೀನು ಕಾಣಲು ಎತ್ನಿಸು (ಅರಸು).