Showing posts with label ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ. Show all posts
Showing posts with label ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ. Show all posts

Tuesday, May 10, 2011

ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ (7)

ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ |
ಸುರಿವೆನೆನ್ನೆದೆಚೀಲದೆಲ್ಲ ಪುರುಳುಗಳ |
ಸರಿ ನೋಡಿ ಕೊಡುವ ಸಜ್ಜನರಿಹರೆ ಲೋಕದಲಿ |
ಶರಣಪ್ಪೆನವರಿಂಗೆ - ಮರುಳ ಮುನಿಯ || (೭)

 ಸುರಿವೆನು+ಎನ್ನ+ಎದೆಯ+ಚೀಲದ+ಎಲ್ಲ)(ಸಜ್ಜನರು+ಇಹರೆ)(ಶರಣು+ಅಪ್ಪೆಂ+ಆವರಿಂಗೆ)

 ನಾನು ಮರುಳಮುನಿಯ, ಮಂಕುತಿಮ್ಮನ ಬಳಿಕ ಬಂದವನು. ನನ್ನ ಹೃದಯದ ಚೀಲದಲ್ಲಿರುವ ಸಕಲ ಸಾರ(ಪುರುಳು)ಗಳನ್ನು ಈ ಕೃತಿಯಲ್ಲಿ ಸುರಿಯುತ್ತೇನೆ. ಇದರ ಒಪ್ಪು ತಪ್ಪುಗಳನ್ನು ನೋಡಿ ಕೊಡುವಂತಹ ಸಂಭಾವಿತ ಜನರು ಈ ಲೋಕದಲ್ಲಿ ಇರುವರೇನು? ಹಾಗಿದ್ದಲ್ಲಿ ಅವರಿಗೆ ಶರಣು ಎನ್ನುತ್ತೇನೆ.