Tuesday, November 25, 2014

ಬಿಸಿ ಬಿಸಿಯ ನೀರಿಂಗೆ ಹಿಮಗಿರಿಯ ತಣ್ಣೀರ (701)

ಬಿಸಿ ಬಿಸಿಯ ನೀರಿಂಗೆ ಹಿಮಗಿರಿಯ ತಣ್ಣೀರ |
ಹಸಿರು ತಣ್ಣೀರಿಂಗೆ ಬಿಸಿಯ ಸೇರಿಸುತೆ ||
ಹಸನು ಶೀತೋಷ್ಣದಿಂದೊಡಲ ಮಜ್ಜನಗೈವ |
ಕುಶಲತೆ ಸಮನ್ವಯವೊ - ಮರುಳ ಮುನಿಯ || (೭೦೧)

(ಶೀತ+ಉಷ್ಣದಿಂದ+ಒಡಲ)

ಬಿಸಿ ಬಿಸಿಯಾಗಿರುವ ನೀರಿಗೆ ಹಿಮದ ಪರ್ವತದಿಂದ ಇಳಿದುಬಂದ ನದಿಯ ತಣ್ಣೀರನ್ನು ಮತ್ತು ಬಹು ತಣ್ಣಗಿರುವ ನೀರಿಗೆ ಬಿಸಿ ನೀರನ್ನು ಸೇರಿಸುತ್ತಾ, ದೇಹಕ್ಕೆ ಹದವಾಗಿ ಹಿತಕಾರಿಯಾಗಿರುವ ತಂಪು ಮತ್ತು ಬಿಸಿನೀರಿನಿಂದ ದೇಹವನ್ನು ಸ್ನಾನ (ಮಜ್ಜನ) ಮಾಡಿಸುವ ಚತುರತೆಯನ್ನು, ಸಮನ್ವಯ ಜೀವನ ವಿಧಾನ ಎನ್ನುವರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Adding ice-cold water to very hot water,
Mixing very hot water with very cold water,
Bathing the body with comfortable lukewarm water
Is the skillfulness called coordination – Marula Muniya (701)
(Translation from "Thus Sang Marula Muniya" by Sri. Narasimha Bhat)

No comments:

Post a Comment