Showing posts with label ಅನಿಲಗತಿ ಜಲಧಾರೆ ದಿನಪರಶ್ಮಿಗಳಿಂದೆ. Show all posts
Showing posts with label ಅನಿಲಗತಿ ಜಲಧಾರೆ ದಿನಪರಶ್ಮಿಗಳಿಂದೆ. Show all posts

Thursday, December 29, 2011

ಅನಿಲಗತಿ ಜಲಧಾರೆ ದಿನಪರಶ್ಮಿಗಳಿಂದೆ (132)

ಅನಿಲಗತಿ ಜಲಧಾರೆ ದಿನಪರಶ್ಮಿಗಳಿಂದೆ |
ಜನಕಾರ್ಯ ಯಂತ್ರಗಳ ನಿರವಿಸುವ ಚತುರರ್ ||
ಮನುಜಹೃದಯೋದ್ವೇಗ ಶಕ್ತಿಯನು ಯಂತ್ರಕ್ಕೆ |
ವಿನಿಯೋಜಿಸರೇಕೆ - ಮರುಳ ಮುನಿಯ || (೧೩೨)

(ಹೃದಯ+ಉದ್ವೇಗ)(ವಿನಿಯೋಜಿಸರ್+ಏಕೆ)

ಬೀಸುವ ಗಾಳಿಯ ರಭಸ (ಅನಿಲಗತಿ), ನೀರಿನ ಪ್ರವಾಹ (ಜಲಧಾರೆ) ಮತ್ತು ಸೂರ್ಯನ(ದಿನಪ) ಕಿರಣ(ರಶ್ಮಿ)ಗಳಿಂದ ಜನಗಳಿಗೆ ಉಪಯುಕ್ತವಾಗುವ ಯಂತ್ರಗಳನ್ನು ನಿರ್ಮಿಸುವ ನಿಪುಣರು, ಮನುಷ್ಯರ ಹೃದಯಗಳ ಉದ್ರೇಕದ ಶಕ್ತಿಯನ್ನು ಯಂತ್ರ ನಿರ್ಮಾಣಕ್ಕೆ ಏಕೆ ಬಳಸಿಕೊಳ್ಳಲಾರರು (ವಿನಿಯೋಜಿಸು) ?