Showing posts with label ಅರೆದೈವವರೆದೈತ್ಯ ನರನೆನಿಪ್ಪ ವಿಚಿತ್ರ. Show all posts
Showing posts with label ಅರೆದೈವವರೆದೈತ್ಯ ನರನೆನಿಪ್ಪ ವಿಚಿತ್ರ. Show all posts

Thursday, February 23, 2012

ಅರೆದೈವವರೆದೈತ್ಯ ನರನೆನಿಪ್ಪ ವಿಚಿತ್ರ (166)

ಅರೆದೈವವರೆದೈತ್ಯ ನರನೆನಿಪ್ಪ ವಿಚಿತ್ರ |
ಧುರರಂಗಮವರೀರ‍್ವರಿಗೆ (ಮರ್ತ್ಯ) ಹೃದಯ ||
ತೆರೆಮರೆಯೊಳಿರುತವರು ಸಭ್ಯವೇಷದ ಭಟರ |
ಹರಿಬ ತಿಳಿಸುವುದುಂಟು - ಮರುಳ ಮುನಿಯ || (೧೬೬)

(ಅರೆದೈವ+ಅರೆದೈತ್ಯ)(ನರನ್+ಎನಿಪ್ಪ)(ಧುರರಂಗಂ+ಅವರೀರ‍್ವರಿಗೆ)(ತೆರೆಮರೆಯೊಳ್+ಇರುತ+ಅವರು)(ತಿಳಿಸುವುದು+ಉಂಟು)

ಮನುಷ್ಯನೆಂದೆನಿಕೊಳ್ಳುವ ಈ ಆಶ್ಚರ್ಯಕರವಾದ ಜೀವಿ, ಅರ್ಧ ಭಾಗ ದೈವಾಂಶವಾಗಿಯೂ ಮತ್ತು ಇನ್ನರ್ಧಭಾಗ ಅಸುರಾಂಶ(ದೈತ್ಯ)ನಾಗಿಯೂ ಇದ್ದಾನೆ. ಇಂತಹ ಮನುಷ್ಯನ ಹೃದಯವೇ ಇವರಿಬ್ಬರ ರಣ(ಧುರ)ರಂಗ. ಪರದೆಯ ಹಿಂದೆ ಬಚ್ಚಿಟ್ಟುಕೊಂಡಿರುವ ಇವರು ಸಭ್ಯವೇಷವನ್ನು ಹಾಕಿಕೊಂಡಿರುವ ಯೋಧರ ಸಂಚು(ಹರಿಬ)ಗಳನ್ನು ಬಯಲುಪಡಿಸುತ್ತಾರೆ.