Showing posts with label ಆವ ಬಚ್ಚಲ ನೀರದಾವ ಹೊಳೆಯನೊ ಸೇರಿ. Show all posts
Showing posts with label ಆವ ಬಚ್ಚಲ ನೀರದಾವ ಹೊಳೆಯನೊ ಸೇರಿ. Show all posts

Thursday, April 19, 2012

ಆವ ಬಚ್ಚಲ ನೀರದಾವ ಹೊಳೆಯನೊ ಸೇರಿ (194)

ಆವ ಬಚ್ಚಲ ನೀರದಾವ ಹೊಳೆಯನೊ ಸೇರಿ |
ಆವ ನದಿಯೊಳು ಪರಿದು ಕಡಲ ಪಾಲಕ್ಕುಂ ||
ಜೀವಿಗಳ ಗತಿಯಂತು ದಾರಿ ಗೊತ್ತಿರುವರಾರ್ |
ಆವುದೆನಲದೆ ದಾರಿ - ಮರುಳ ಮುನಿಯ || (೧೯೪)

(ನೀರ್+ಅದು+ಆವ)(ಪಾಲ್+ಅಕ್ಕುಂ)(ಗತಿ+ಅಂತು)(ಗೊತ್ತು+ಇರುವರು+ಆರ್)(ಆವುದು+ಎನಲ್+ಅದೆ)

ಮನೆಯಿಂದ ಹೊರಗೆ ಹರಿಯುವ ನೀರು ಚರಂಡಿಯಲ್ಲಿ ಹರಿದು ಇನ್ಯಾವ ಹೊಳೆಯನ್ನೊ ಸೇರಿ, ಅನಂತರ ಮತ್ತೆ ಯಾವ ನದಿಯಲ್ಲೊ ಹರಿದು, ಸಮುದ್ರದ ಪಾಲಾಗುತ್ತದೆ. ಈ ಪ್ರಪಂಚದಲ್ಲಿ ಜೀವಿಸುತ್ತಿರುವ ಜೀವಿಗಳ ಅವಸ್ಥೆಯೂ ಹಾಗೆಯೇ ಹೌದು. ಈ ಜೀವಿಗಳ ದಾರಿ ಮತ್ತು ಗುರಿಗಳನ್ನು ತಿಳಿದವರ‍್ಯಾರು? ಯಾವುದಾದರೆ ಅದೇ ಅವುಗಳ ದಾರಿ.