Showing posts with label ಇರುವುದೆಲ್ಲಕು ಮೊದಲು ಬೀಜವದು ಮೂಲವದು. Show all posts
Showing posts with label ಇರುವುದೆಲ್ಲಕು ಮೊದಲು ಬೀಜವದು ಮೂಲವದು. Show all posts

Monday, January 9, 2012

ಇರುವುದೆಲ್ಲಕು ಮೊದಲು ಬೀಜವದು ಮೂಲವದು (138)

ಇರುವುದೆಲ್ಲಕು ಮೊದಲು ಬೀಜವದು ಮೂಲವದು |
ಬರುವುದದರಿಂದೆಲ್ಲ ಜಗ ಜೀವ ಗಾಳಿ ||
ನೆರೆದು ಧರಿಸಿರುವುದದು ಪೊರೆವುದದು ಕರಗಿಪುದು |
ಮೆರೆವುದದು ನಿನ್ನೊಳಗೆ - ಮರುಳ ಮುನಿಯ || (೧೩೮)

(ಇರುವುದು+ಎಲ್ಲಕು)(ಬರುವುದು+ಅದರಿಂದ+ಎಲ್ಲ)(ಧರಿಸಿ+ಇರುವುದು+ಅದು)(ಮೆರೆವುದು+ಅದು)

ಎಲ್ಲದಕ್ಕೂ ಮೊತ್ತಮೊದಲನೆಯದಾಗಿ ಇರುವುದೇ ಅದು. ಅದೇ ಬಿತ್ತ ಮತ್ತು ಹುಟ್ಟು. ಅದರಿಂದಲೇ ಪ್ರಪಂಚ, ಗಾಳಿ ಮತ್ತು ಜೀವಗಳು ಬರುತ್ತವೆ. ಅದು ಉಕ್ಕಿ(ನೆರೆ) ಎಲ್ಲವನ್ನೂ ಹೊತ್ತಿವೆ, ಕಾಪಾಡುತ್ತದೆ ಮತ್ತು ತನ್ನಲ್ಲೇ ಒಂದಾಗಿಸಿ ಕರಗಿಸಿಕೊಳ್ಳುತ್ತದೆ. ಅದು ನಿನ್ನೊಳಗೆ ಮೆರೆಯುತ್ತದೆ.