Showing posts with label ಇರುವುದೊಂದೆರೆಡೆನಿಸಿ ತೋರುವುದು ಲೋಗರ‍್ಗೆ. Show all posts
Showing posts with label ಇರುವುದೊಂದೆರೆಡೆನಿಸಿ ತೋರುವುದು ಲೋಗರ‍್ಗೆ. Show all posts

Wednesday, November 2, 2011

ಇರುವುದೊಂದೆರೆಡೆನಿಸಿ ತೋರುವುದು ಲೋಗರ‍್ಗೆ (95)


ಇರುವುದೊಂದೆರೆಡೆನಿಸಿ ತೋರುವುದು ಲೋಗರ‍್ಗೆ |
ಇರದೆ ತೋರುವುದೆಂತು ತೋರದಿರವೆಂತು ? ||
ಪರತತ್ತ್ವ ಲೋಕಂಗಳೆರಡುಮೊಂದೇ ವಸ್ತು |
ಮರದ ಬೇರೆಲೆಯವೊಲು - ಮರುಳ ಮುನಿಯ || (೯೫)

(ಇರುವುದು+ಒಂದು+ಎರೆಡು+ಎನಿಸಿ)(ತೋರುವುದು+ಎಂತು)(ತೋರದೆ+ಇರವು+ಎಂತು)(ಲೋಕಂಗಳ್+ಎರಡುಂ+ಒಂದೇ)(ಬೇರ್+ಎಲೆಯ+ವೊಲು)

ಇರುವ ವಸ್ತು ಒಂದೇ ಒಂದಾದರೂ ಸಹ ಅದು ಜನಗಳ ಕಣ್ಣುಗಳಿಗೆ ಎರಡೆಂದೆನ್ನಿಸುವಂತೆ ಕಾಣಿಸಿಕೊಳ್ಳುತ್ತದೆ. ಆ ವಸ್ತು ಇರದಿದ್ದರೆ ಅದು ಹೇಗೆ ತಾನೆ ಕಾಣಿಸಿಕೊಳ್ಳಬಲ್ಲುದು ಅಥವಾ ಅದು ಇದ್ದರೆ ಕಾಣಿಸಿಕೊಳ್ಳದೆ ಇರಲು ಹೇಗೆ ಸಾಧ್ಯ? ಪರತತ್ತ್ವ ಮತ್ತು ಇಹಲೋಕಗಳೆರಡೂ ಒಂದೇ ವಸ್ತು. ಅದು ಮರದ ಬೇರು ಮತ್ತು ಎಲೆಗಳಂತೆ.