Showing posts with label ಇರುವೊಂದು ಮೆರೆವೊಂದು ಅರಿವೊಂದು ಮೂರನುಂ. Show all posts
Showing posts with label ಇರುವೊಂದು ಮೆರೆವೊಂದು ಅರಿವೊಂದು ಮೂರನುಂ. Show all posts

Tuesday, July 5, 2011

ಇರುವೊಂದು ಮೆರೆವೊಂದು ಅರಿವೊಂದು ಮೂರನುಂ (35)

ಇರುವೊಂದು ಮೆರೆವೊಂದು ಅರಿವೊಂದು ಮೂರನುಂ |
ಪೊರುವೊಂದು ಪರಿಕಿಸಿದರರ್ಥವಂ ಮರುಳೆ ||
ಇರುವುದದು ಸತ್ಯ ಮೆರೆವುದು ಲೋಕ ಅರಿವಾತ್ಮ |
ವೊರುವುದೇ ಬ್ರಹ್ಮವನು -ಮರುಳ ಮುನಿಯ || (೩೫)

 (ಇರುವು+ಒಂದು)(ಮೆರೆವು+ಒಂದು)(ಅರಿವು+ಒಂದು)(ಪೊರು+ಒಂದು)(ಪರಿಕಿಸು+ಇದರ+ಅರ್ಥವನು)
(ಇರುವುದು+ಅದು)(ಅರಿವು+ಆತ್ಮ)

 ಶ್ರೇಷ್ಠವಾದದ್ದು ಒಂದು, ಎದ್ದುತೋರುವ ಚೈತನ್ಯವಿನ್ನೊಂದು, ಜ್ಞಾನ ಮತ್ತೊಂದು. ಈ ಮೂರನ್ನು ಹೊರುವುದು ಒಂದಿದೆ. ಇದರ ಅರ್ಥವನ್ನು ಪರೀಕ್ಷಿಸು. ಓ ದಡ್ಡ! ಶ್ರೇಷ್ಠನಾಗಿ ಇರುವುದೇ ಸತ್ಯ. ಎದ್ದು ತೋರುವ ಚೈತನ್ಯವೇ ಈ ಪ್ರಪಂಚ. ಅರಿವು ಆತ್ಮ. ಆದರೆ ಇವೆಲ್ಲವನ್ನು ಹೊರುವುದೇ ಆ ಪರಬ್ರಹ್ಮ.