Showing posts with label ಏಕ ತಾಂ ದ್ವಿಕವಾಗಿ ದ್ವಿಕವೆ ದಶ ಶತವಾಗಿ. Show all posts
Showing posts with label ಏಕ ತಾಂ ದ್ವಿಕವಾಗಿ ದ್ವಿಕವೆ ದಶ ಶತವಾಗಿ. Show all posts

Wednesday, September 21, 2011

ಏಕ ತಾಂ ದ್ವಿಕವಾಗಿ ದ್ವಿಕವೆ ದಶ ಶತವಾಗಿ (70)


ಏಕ ತಾಂ ದ್ವಿಕವಾಗಿ ದ್ವಿಕವೆ ದಶ ಶತವಾಗಿ |
ಸೋಕಲೊಂದಿನ್ನೊಂದ ನವರಚನೆಯಾಗಿ ||
ಸ್ತೋಕಾಣುವೊಂದರಂಶ ಪರಂಪರೆಯ ಘರ್ಷ |
ವೈಕೃತಂಗಳೆ ಸೃಷ್ಟಿ - ಮರುಳ ಮುನಿಯ || (೭೦)

(ದ್ವಿಕ+ಆಗಿ)(ಶತ+ಆಗಿ)(ಸೋಕಲ್+ಒಂದು+ಇನ್ನೊಂದ)(ನವರಚನೆ+ಆಗಿ)
(ಸ್ತೋಕ+ಅಣು+ಒಂದರ+ಅಂಶ)

ಒಂದು ಎರಡಾಗಿ, ಎರಡು ಹತ್ತಾಗಿ, ಹತ್ತು ನೂರಾಗಿ, ಒಂದನ್ನೊಂದು ಸ್ಪರ್ಶಿಸಲು ಹೊಸ ನಿರ್ಮಾಣವಾಗಿ, ಅವುಗಳ ಸಣ್ಣ ಅಣುವಿನ (ಸ್ತೋಕಾಣು) ಒಂದು ಭಾಗದ ಕಾಲಾನುಗತವಾಗಿ ಇಳಿದುಬಂದ (ಪರಪಂರೆ) ತಿಕ್ಕಾಡುವಿಕೆ ಮತ್ತು ರೂಪಾಂತರಗಳೇ (ವೈಕೃತಂಗಳೆ) ಸೃಷ್ಟಿ.