Showing posts with label ಒಂದೆ ನಾಲಗೆ ನೂರು ಸವಿಗಳನು ಸವಿಯುವುದು. Show all posts
Showing posts with label ಒಂದೆ ನಾಲಗೆ ನೂರು ಸವಿಗಳನು ಸವಿಯುವುದು. Show all posts

Wednesday, February 15, 2012

ಒಂದೆ ನಾಲಗೆ ನೂರು ಸವಿಗಳನು ಸವಿಯುವುದು (161)

ಒಂದೆ ನಾಲಗೆ ನೂರು ಸವಿಗಳನು ಸವಿಯುವುದು |
ಒಂದೆ ಮನ ನೂರೆಂಟು ಕನಸ ಕಾಣುವುದು ||
ಒಂದೆ ಬೊಮ್ಮದಿನುಣ್ಮಿದೊಂದೆ ಮಾಯೆಯಿನೆ ನಿ-|
ನ್ನಂದ ಕುಂದುಗಳೆಲ್ಲ - ಮರುಳ ಮುನಿಯ || (೧೬೧)

(ಬೊಮ್ಮದಿನ್+ಉಣ್ಮಿದ+ಒಂದೆ)(ನಿನ್ನ+ಅಂದ)(ಕುಂದುಗಳ್+ಎಲ್ಲ)

ಒಂದೇ ಒಂದು ನಾಲಿಗೆ ಇರುವುದಾದರೂ, ಅದು ನೂರಾರು ರುಚಿಗಳನ್ನು ಸವಿಯಬಲ್ಲುದು. ಒಂದೇ ಒಂದು ಮನಸ್ಸು ನೂರಾರು ಕನಸುಗಳನ್ನು ಕಾಣಬಲ್ಲುದು. ನಿನ್ನ ಚೆಲುವು ಮತ್ತು ಕೊರತೆಗಳೆಲ್ಲವೂ ಒಬ್ಬನೇ ಒಬ್ಬನಾದ ಪರಬ್ರಹ್ಮನಿಂದ ಹೊರಹೊಮ್ಮಿದ ಮಾಯೆಯಿಂದ ಆಗಿವೆ.