Showing posts with label ಕರಣ ಕಾರಕ ಮರುಳ ಮಿಶ್ರವೆಲ್ಲ ವಿಶ್ವಪದಾರ್ಥ. Show all posts
Showing posts with label ಕರಣ ಕಾರಕ ಮರುಳ ಮಿಶ್ರವೆಲ್ಲ ವಿಶ್ವಪದಾರ್ಥ. Show all posts

Friday, September 23, 2011

ಕರಣ ಕಾರಕ ಮಿಶ್ರವೆಲ್ಲ ವಿಶ್ವಪದಾರ್ಥ (72)


ಕರಣ ಕಾರಕ ಮಿಶ್ರವೆಲ್ಲ ವಿಶ್ವಪದಾರ್ಥ |
ಕ್ಷರದೇಹವೊಂದು ಅಕ್ಷರಸತ್ತ್ವವೊಂದು ||
ಪರಿಮೇಯ ಯಂತ್ರಾಂಶ ಚೇತನಾಂಶವಮೇಯ |
ಹರವೆರಡಕೆರಡು ತೆರ - ಮರುಳ ಮುನಿಯ || (೭೨)

(ಯಂತ್ರ+ಅಂಶ)(ಚೇತನ+ಅಂಶವು+ಅಮೇಯ)(ಹರವು+ಎರಡಕೆ+ಎರಡು)

ಈ ಪ್ರಪಂಚದಲ್ಲಿರುವ ಪದಾರ್ಥಗಳೆಲ್ಲವೂ ಕ್ರಿಯಾಸಾಧನ (ಕರಣ) ಮತ್ತು ಕರ್ತೃವಿನ (ಕಾರಕ) ಮಿಶ್ರಣದಿಂದ ಆಗಿವೆ. ಒಂದು ನಾಶ(ಕ್ಷರ)ವಾಗುವ ದೇಹ ಮತ್ತು ಮತ್ತೊಂದು ನಾಶವಾಗದಿರುವ (ಅಕ್ಷರ) ಸಾರ. ಈ ಯಂತ್ರಗಳ ಭಾಗಗಳು ನಮ್ಮ ಅಳತೆಗೆ ಸಿಕ್ಕುತ್ತವೆ (ಪರಿಮೇಯ). ಆದರೆ ಈ ಚೈತನ್ಯದ ಭಾಗವು ನಮ್ಮ ಅಳತೆಗೆ ಸಿಗಲಾರದು (ಅಮೇಯ). ಇವೆರಡೂ, ಎರಡು ಬೇರೆ ಬೇರೆ ರೀತಿಯಲ್ಲಿ ವ್ಯಾಪಿಸಿಕೊಂಡಿವೆ.