Showing posts with label ಕಾಯ ಯಂತ್ರದ ರಚನೆ ರೀತಿಗಳ ಪರಿಕಿಸಲು. Show all posts
Showing posts with label ಕಾಯ ಯಂತ್ರದ ರಚನೆ ರೀತಿಗಳ ಪರಿಕಿಸಲು. Show all posts

Friday, May 25, 2012

ಕಾಯ ಯಂತ್ರದ ರಚನೆ ರೀತಿಗಳ ಪರಿಕಿಸಲು (212)

ಕಾಯ ಯಂತ್ರದ ರಚನೆ ರೀತಿಗಳ ಪರಿಕಿಸಲು |
ಧೀಯುಕ್ತಿ ಸಂಧಾನವದುವೆ ವಿಜ್ಞಾನ ||
ಮೇಯಗಳ ಮೀರ‍್ದ ಸತ್ತ್ವಕ್ಕಾತ್ಮ ಸಂಸ್ಕೃತಿಯೆ |
ನೇಯವದುವೆ ತಪಸ್ಸು - ಮರುಳ ಮುನಿಯ || (೨೧೨)

(ಸಂಧಾನ+ಅದುವೆ)(ಸತ್ತ್ವಕ್ಕೆ+ಆತ್ಮ)(ನೇಯ+ಅದುವೆ)

ಮನುಷ್ಯನ ದೇಹವೆಂಬ ಯಂತ್ರವನ್ನು ಪರೀಕ್ಷಿಸಲು ಬುದ್ಧಿಶಕ್ತಿ(ಧೀ) ಮತ್ತು ತಂತ್ರಗಳ ಹೊಂದಾಣಿಕೆ. ಅದೇ ವಿಜ್ಞಾನವೆಂದೆನ್ನಿಸಿಕೊಳ್ಳುತ್ತದೆ. ನಮಗೆ ತಿಳಿಯಬಹುದಾದ ವಸ್ತು(ಮೇಯ)ಗಳನ್ನು ಮೀರಿದ ಸಾರವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆತ್ಮದ ವಿಕಾಸ ಮತ್ತು ಪಕ್ವತೆಯೇ ಗುರಿ(ನೇಯ). ಅದೇ ತಪಸ್ಸು.