Showing posts with label ಗಾಳಿ ಸಚ್ಚಿತ್ಪರಬ್ರಹ್ಮವುಸಿರುವ ಲೀಲೆ. Show all posts
Showing posts with label ಗಾಳಿ ಸಚ್ಚಿತ್ಪರಬ್ರಹ್ಮವುಸಿರುವ ಲೀಲೆ. Show all posts

Monday, May 28, 2012

ಗಾಳಿ ಸಚ್ಚಿತ್ಪರಬ್ರಹ್ಮವುಸಿರುವ ಲೀಲೆ (213)

ಗಾಳಿ ಸಚ್ಚಿತ್ಪರಬ್ರಹ್ಮವುಸಿರುವ ಲೀಲೆ |
ಮೂಲೋಕದೊಳಗೆ ಹೊರಗೆಲ್ಲೆಡೆಯುಮಲೆತ ||
ಚಾಲಿಪ್ಪುದೆಲ್ಲವನು ಕೇಳ್ವರಾರಾರದನು ? |
ಮೂಲದ ರಹಸ್ಯವದು - ಮರುಳ ಮುನಿಯ || (೨೧೩)

(ಸತ್+ಚಿತ್+ಪರಬ್ರಹ್ಮ+ಉಸಿರುವ)(ಹೊರಗೆ+ಎಲ್ಲೆಡೆಯುಂ+ಅಲೆತ)(ಚಾಲಿಪ್ಪುದು+ಎಲ್ಲವನು)(ಕೇಳ್ವರ್+ಆರಾರು+ಅದನು)(ರಹಸ್ಯ+ಅದು)

ಗಾಳಿಯು ಶ್ರೇಷ್ಠ, ಚೈತನ್ಯನಾದ ಆ ಪರಬ್ರಹ್ಮನು ಉಸಿರುವ ಆಟ. ಅದು ಮೂರು ಲೋಕಗಳ ಒಳಗೆ, ಹೊರಗೆ ಮತ್ತು ಎಲ್ಲಾ ಕಡೆಗಳಲ್ಲಿಯೂ ಸಂಚರಿಸುತ್ತದೆ. ಅದು ಎಲ್ಲವನ್ನೂ ಚಲಿಸುವಂತೆ ಮಾಡುತ್ತದೆ. ಅದನ್ನು ಕೇಳುವವರು ಯಾರಿರುವರು ? ಅದು ಆದಿಯ ಗುಟ್ಟು.