Showing posts with label ಜನುಮ ಜನುಮಾಂತರಂಗಳ ಲೆಕ್ಕಗಳನಿಟ್ಟು. Show all posts
Showing posts with label ಜನುಮ ಜನುಮಾಂತರಂಗಳ ಲೆಕ್ಕಗಳನಿಟ್ಟು. Show all posts

Friday, February 10, 2012

ಜನುಮ ಜನುಮಾಂತರಂಗಳ ಲೆಕ್ಕಗಳನಿಟ್ಟು (158)

ಜನುಮ ಜನುಮಾಂತರಂಗಳ ಲೆಕ್ಕಗಳನಿಟ್ಟು |
ಋಣವ ನಿನ್ನಿಂ ತೆರಿಸಿಕೊಳಲು ಕಾದಿರುವಾ ||
ಗಣಿತಸೂತ್ರದ ಶೂರನೇಂ ಬೊಮ್ಮ ಬೇರೆ ಹಿರಿ-|
(ತನ ನಯ)ವವನದಿಲ್ಲ? - ಮರುಳ ಮುನಿಯ || (೧೫೮)

(ಲೆಕ್ಕಗಳನ್+ಇಟ್ಟು)(ಕಾದಿರುವ+ಆ)(ನಯವು+ಅವನದಿಲ್ಲ)

ಹಿಂದಿನ ಮತ್ತು ಮುಂದಿನ ಅನೇಕ ಜನ್ಮಗಳ ಲೆಕ್ಕಾಚಾರಗಳನ್ನಿಟ್ಟುಕೊಂಡು, ಅವುಗಳ ಸಾಲ(ಋಣ)ಗಳನ್ನು ನಿನ್ನಿಂದ ತೆಗೆದುಕೊಳ್ಳಲು ಕಾದುಕೊಂಡಿರುವ ಆ ಲೆಕ್ಕಾಚಾರ ನಿಯಮಗಳ (ಸೂತ್ರ) ಧೀರನೇನು ಈ ಪರಬ್ರಹ್ಮನೆನ್ನುವನು? ಇವನಲ್ಲಿ ಇತರ ಯಾವ ದೊಡ್ಡತನ ಮತ್ತು ನೀತಿ(ನಯ)ಗಳಿಲ್ಲವೇನು?