Showing posts with label ಜ್ಞಾನಿಯುಂ ಹೊರುವನ ಜ್ಞಾನಿ ವೊಲೆ ಸೃಷ್ಟಿಸಂ. Show all posts
Showing posts with label ಜ್ಞಾನಿಯುಂ ಹೊರುವನ ಜ್ಞಾನಿ ವೊಲೆ ಸೃಷ್ಟಿಸಂ. Show all posts

Friday, December 30, 2011

ಜ್ಞಾನಿಯುಂ ಹೊರುವನ ಜ್ಞಾನಿ ವೊಲೆ ಸೃಷ್ಟಿಸಂ (133)

ಜ್ಞಾನಿಯುಂ ಹೊರುವನ ಜ್ಞಾನಿ ವೊಲೆ ಸೃಷ್ಟಿಸಂ-|
ತಾನಪಾಲನೆಯ ಕರ್ತವ್ಯ ಭಾರವನು ||
ಬೋನಕಾಶಿಸಿ ದಾನಿಭಯದೆ ಹೊರುವವನೊರ‍್ವ |
ಸಾನುಕಂಪೆಯಿನೊರ‍್ವ - ಮರುಳ ಮುನಿಯ || (೧೩೩)
(ಬೋನಕೆ+ಆಶಿಸಿ)(ಹೊರುವವನ್+ಒರ‍್ವ)
ತಿಳಿದಂಥವನು ಹೊರುವಂತೆ ಮತ್ತು ಅವನಂತೆಯೇ ಸೃಷ್ಟಿಯ ಪೀಳಿಗೆಗಳ ರಕ್ಷಣೆಯ ಕರ್ತವ್ಯದ ಭಾರವನ್ನು, ಅನ್ನ (ಬೋನಕೆ) ಮತ್ತು ಆಹಾರಕ್ಕೆ ಆಶಿಸಿ, ದಾನಿಯ ಭಯದಿಂದ ಹೊರುವವನು ಒಬ್ಬನಾದರೆ ಸಹಾನುಭೂತಿ ಮತ್ತು ದಯೆಯಿಂದ ಮತ್ತೊಬ್ಬನು ಹೊರುತ್ತಾನೆ.