Showing posts with label ತನುವೇನು ಮನವೇನು ಘನವೇನು ರಸವೇನು. Show all posts
Showing posts with label ತನುವೇನು ಮನವೇನು ಘನವೇನು ರಸವೇನು. Show all posts

Tuesday, August 16, 2011

ತನುವೇನು ಮನವೇನು ಘನವೇನು ರಸವೇನು (52)


ತನುವೇನು ಮನವೇನು ಘನವೇನು ರಸವೇನು |
ಗುಣವೇನು ಜಡವೇನು ಜೀವಬಲವೇನು ||
ಅನವಧಿಕ ಮೂಲ ಸ್ವಯಂಭೂತ ಚೈತನ್ಯ |
ಧುನಿಯ ಶೀಕರವೆಲ್ಲ - ಮರುಳ ಮುನಿಯ || (೫೨)

ದೇಹ, ಮನಸ್ಸು, ಘನವಸ್ತು, ರಸಪದಾರ್ಥ, ವಸ್ತುಗಳ ಸ್ವಭಾವಗಳು, ಜಡವಸ್ತುಗಳು ಮತ್ತು ಜೀವಗಳ ಶಕ್ತಿಗಳು, ಇವುಗಳೆಲ್ಲವೂ ಅಪರಿಮಿತ(ಅನವಧಿಕ)ವಾದ, ಆದಿಯಿಂದ ತಾನೇ ತಾನು (ಸ್ವಯಂಭೂತ) ಹುಟ್ಟಿರುವ ಶಕ್ತಿಗಳು. ಇವುಗಳೆಲ್ಲವೂ ಪರಮಾತ್ಮನೆಂಬ ಹೊಳೆ(ಧುನಿ)ಯ ತುಂತುರು ಹನಿ(ಶೀಕರ)ಗಳು.