Showing posts with label ತಳಮಳಿಸಿ ತ್ರಿಗುಣಮಿರೆ ಲೋಕಜೀವನ ಲೀಲೆ. Show all posts
Showing posts with label ತಳಮಳಿಸಿ ತ್ರಿಗುಣಮಿರೆ ಲೋಕಜೀವನ ಲೀಲೆ. Show all posts

Monday, November 14, 2011

ತಳಮಳಿಸಿ ತ್ರಿಗುಣಮಿರೆ ಲೋಕಜೀವನ ಲೀಲೆ (102)


ತಳಮಳಿಸಿ ತ್ರಿಗುಣಮಿರೆ ಲೋಕಜೀವನ ಲೀಲೆ |
ಅಲುಗುತ್ತಲಲೆಯಿರಲ್ ಕಡಲಿನ ಮಹತ್ತ್ವ ||
ಜಲಧಿ (ವೀತತ) ರಂಗಮಿರೆ ನೋಳ್ಪರಾರ್ (ಅದನು) |
ಚಲನೆಯೇ ಲೀಲೆಯೆಲೊ - ಮರುಳ ಮುನಿಯ || (೧೦೨)

(ತ್ರಿಗುಣಂ+ಇರೆ)(ಅಲುಗುತ್ತಲ್+ಅಲೆಯಿರಲ್)

ಚಿಂತೆ ಮತ್ತು ಗಾಬರಿಗಳನ್ನುಂಟುಮಾಡುವ, ಸತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಸ್ವಭಾವಗಳಿದ್ದರೆ ಈ ಪ್ರಪಂಚದ ಜೀವನದ ಆಟ ಆಡಲು ಚೆನ್ನಾಗಿರುತ್ತದೆ. ಸಮುದ್ರದ ತೆರೆಗಳು ಅಲುಗಾಡುತ್ತಿದ್ದರೆ ಮಾತ್ರ ಅದರ ಹಿರಿಮೆ. ಅಲೆಗಳಿಲ್ಲದಿದ್ದರೆ (ವೀತತರಂಗ) ಸಮುದ್ರವನ್ನು ನೋಡಲು ಯಾರೂ ಬರಲಾರರು. ಈ ರೀತಿಯಾಗಿ ಸದಾಕಾಲವೂ ಕ್ರಿಯಾಶಾಲಿತ್ವದಿಂದ ಕೂಡಿರುವುದೇ ಈ ಪ್ರಪಂಚದ ಆಟದ ಆಕರ್ಷಣೆಯಾಗಿದೆ.