Showing posts with label ತಾರಂಗ ನೃತ್ಯಗತಿ ವಿಶ್ವಜೀವನ ವಿವೃತಿ. Show all posts
Showing posts with label ತಾರಂಗ ನೃತ್ಯಗತಿ ವಿಶ್ವಜೀವನ ವಿವೃತಿ. Show all posts

Thursday, December 8, 2011

ತಾರಂಗ ನೃತ್ಯಗತಿ ವಿಶ್ವಜೀವನ ವಿವೃತಿ (119)

ತಾರಂಗ ನೃತ್ಯಗತಿ ವಿಶ್ವಜೀವನ ವಿತಿ |
ಆರೋಹವವರೋಹವೊಂದಾಗಲೊಂದು ||
ಸಾರೂಪ್ಯಸಮ ಜವತೆಯೆರಡು ತೆರೆಗಳ್ಗಿರದು |
ಬೇರೆತನದಿನೆ ಸೊಗಸು - ಮರುಳ ಮುನಿಯ || (೧೧೯)

(ಆರೋಹವು+ಅವರೋಹವು+ಒಂದಾಗಲೊಂದು)(ತೆರೆಗಳ್ಗೆ+ಇರದು)

ಈ ಪ್ರಪಂಚದ ವಿವರಣೆ(ವಿವೃತಿ) ತೆರೆಗಳ (ತಾರಂಗ) ಕುಣಿತದ ನಡೆಯಂತಿದೆ. ಏರುವುದು (ಆರೋಹ) ಮತ್ತು ಇಳಿಯುವುದು (ಅವರೋಹ), ಇವೆರಡೂ ಒಂದೇ ಆದರೂ, ಒಂದೇ ಸಮನಾದ ಆಕಾರ (ಸಾರೂಪ) ಮತ್ತು ಒಂದೇ ವೇಗ (ಸಮ ಜವತೆ) ಎರಡು ಅಲೆಗಳಿಗಿರಲು ಸಾಧ್ಯವಿಲ್ಲ. ಈ ರೀತಿ ಬೇರೆ ಬೇರೆಯಾಗಿರುವ ವಿವಿಧತೆಯಲ್ಲಿಯೇ ನಾವು ಚೆಲುವು ಮತ್ತು ಸುಖವನ್ನು ಕಾಣುತ್ತೇವೆ.