Showing posts with label ತೃಣ ಸಸ್ಯ ತರುಗಳಲಿ ಕನಕ ಕಬ್ಬಿಣಗಳಲಿ. Show all posts
Showing posts with label ತೃಣ ಸಸ್ಯ ತರುಗಳಲಿ ಕನಕ ಕಬ್ಬಿಣಗಳಲಿ. Show all posts

Thursday, August 18, 2011

ತೃಣ ಸಸ್ಯ ತರುಗಳಲಿ ಕನಕ ಕಬ್ಬಿಣಗಳಲಿ (54)


ತೃಣ ಸಸ್ಯ ತರುಗಳಲಿ ಕನಕ ಕಬ್ಬಿಣಗಳಲಿ |
ಮಣಿ ಮರಳು ಶಿಲೆಗಳಲಿ ಶುನಕ ಹರಿಣದಲಿ ||
ಗುಣ ಶಕ್ತಿ ವಿವಿಧತೆಯನನುವಂಶವಿರಿಸಿರ್ಪು - |
ದನ್ಯೋನ್ಯತೆಯ ಕಲಿಸೆ - ಮರುಳ ಮುನಿಯ || (೫೪)

(ವಿವಿಧತೆಯನು+ಅನುವಂಶ+ಇರಿಸಿ+ಇರ್ಪುದು+ಅನ್ಯೋನ್ಯತೆಯ)

ಹುಲ್ಲು (ತೃಣ), ಸಸ್ಯ, ಗಿಡಮರಗಳು, ಚಿನ್ನ(ಕನಕ), ಕಬ್ಬಿಣ, ರತ್ನ(ಮಣಿ), ಮರಳು, ಕಲ್ಲು(ಶಿಲೆ), ನಾಯಿ(ಶುನಕ) ಮತ್ತು ಜಿಂಕೆ ಇತ್ಯಾದಿಗಳಲ್ಲಿ, ಇವುಗಳು ಪರಸ್ಪರ ಪ್ರೀತಿಸುವುದನ್ನು ಕಲಿಯಲು, ಅನುವಂಶಿಕತೆಯು(ಅನುವಂಶ) ಬಗೆಬಗೆಯ ಸ್ವಭಾವ ಮತ್ತು ಬಲಾಬಲಗಳನ್ನು ಇಟ್ಟಿದೆ.