Showing posts with label ತೊರೆಯೊಂದು ಪರಬೊಮ್ಮ ತೆರೆಸಾಲು ಲೋಕಗಳು. Show all posts
Showing posts with label ತೊರೆಯೊಂದು ಪರಬೊಮ್ಮ ತೆರೆಸಾಲು ಲೋಕಗಳು. Show all posts

Tuesday, November 22, 2011

ತೊರೆಯೊಂದು ಪರಬೊಮ್ಮ ತೆರೆಸಾಲು ಲೋಕಗಳು (108)


ತೊರೆಯೊಂದು ಪರಬೊಮ್ಮ ತೆರೆಸಾಲು ಲೋಕಗಳು |
ಪರಿದೇಳ್ದು ಬಿದ್ದೇಳ್ವುದೋ ತೆರೆಯ ಬಾಳು ||
ಉರುಳಿದಲೆ ಮತ್ತೇಳುವುದು ತೊರೆಯ ಜೀವಾಳ |
ಹೊರಳಾಟವೇ ಲೀಲೆ - ಮರುಳ ಮುನಿಯ || (೧೦೮)

(ಪರಿದು+ಏಳ್ದು)(ಬಿದ್ದು+ಏಳ್ವುದೋ)(ಉರುಳಿದ+ಅಲೆ)(ಮತ್ತೆ+ಏಳುವುದು)

ಪರಮಾತ್ಮ ಒಂದು ನದಿ ಇದ್ದ ಹಾಗೆ. ವಿಧ ವಿಧವಾದ ಲೋಕಗಳು ಆ ನದಿಯ ಅಲೆಗಳ ಸಾಲುಗಳು. ಆ ಅಲೆಗಳ ಜೀವನವು ಹರಿದು ಏಳುವುದೋ ಅಥವಾ ಬಿದ್ದು ಏಳುವುದೋ ಯಾವುದೋ ಒಂದು ರೀತಿಯಲ್ಲಿ ಆಗಿರುತ್ತದೆ. ಉರುಳಿದ ಅಲೆಯು ನದಿಯ ಸತ್ತ್ವದಿಂದ ಪುನಃ ಮೇಲಕ್ಕೇಳುತ್ತದೆ. ನದಿಯ ಹರಿವಿನ ಚೆಂದ ಅದರ ಅಲೆಗಳ ಈ ಏಳುಬೀಳುಗಳಿಂದಲೇ ಆಗಿದೆ. ಈ ರೀತಿಯಾಗಿ ಲೋಕವು ಹೊರಳಾಡುತ್ತಿರುವುದೇ ಒಂದು ವಿನೋದವಾದ ಆಟವಾಗಿದೆ.