Showing posts with label ದೃಶ್ಯ ತನು ಘಟದೊಳಗದೃಶ್ಯ ಮಾನಸಶಕ್ತಿ. Show all posts
Showing posts with label ದೃಶ್ಯ ತನು ಘಟದೊಳಗದೃಶ್ಯ ಮಾನಸಶಕ್ತಿ. Show all posts

Thursday, May 10, 2012

ದೃಶ್ಯ ತನು ಘಟದೊಳಗದೃಶ್ಯ ಮಾನಸಶಕ್ತಿ (205)

ದೃಶ್ಯ ತನು ಘಟದೊಳಗದೃಶ್ಯ ಮಾನಸಶಕ್ತಿ |
ಸ್ಪೃಶ್ಯ ಹೃನ್ನಾಡಿಯೊಳಗಸ್ಪೃಶ್ಯಸತ್ತ್ವ ||
ವಿಶ್ವ ಜೀವಂಗಳೊಳಗಂತು ಗೂಢದ ಚಿತ್ತು |
ಶಾಶ್ವತ ರಹಸ್ಯವದು - ಮರುಳ ಮುನಿಯ || (೨೦೫)

(ಘಟದೊಳಗೆ+ಅದೃಶ್ಯ)(ಹೃನ್ನಾಡಿಯೊಳಗೆ+ಅಸ್ಪೃಶ್ಯ)(ಜೀವಂಗಳೊಳಗೆ+ಅಂತು)(ರಹಸ್ಯ+ಅದು)

ಕಣ್ಣಿಗೆ ಗೋಚರವಾಗುವ (ದೃಶ್ಯ) ದೇಹ(ತನು)ವೆಂಬ ಗಡಿಗೆ(ಘಟ)ಯೊಳಗೆ ಅಗೋಚರವಾದ (ಅದೃಶ್ಯ) ಮನಸ್ಸಿನ ಒಂದು ಬಲವಿದೆ. ಹೃದಯದಿಂದ ಹರಿಯುವ ಧಮನಿಗಳನ್ನು ನಾವು ಮುಟ್ಟಿನೋಡಲು ಸಾಧ್ಯ. ಆದರೆ ಅವುಗಳ ಸಾಮರ್ಥ್ಯವನ್ನು ಮುಟ್ಟಿ ನೋಡಲು ಸಾಧ್ಯವಿಲ್ಲ. ಈ ರೀತಿಯಾಗಿ ಪ್ರಪಂಚದ ಜೀವಿಗಳ ಒಳಗೆ ಬಚ್ಚಿಟ್ಟುಕೊಂಡಿರುವ ಚೈತನ್ಯವು ಹರಿಯುತ್ತಿದೆ. ಇದು ಎಂದೆಂದಿಗೂ ಇರುವ ಗುಟ್ಟು.