Showing posts with label ದೇವರೇಂ ಜೀವಕೋಟಿ ಸಮಷ್ಟಿಯನು ಬಿಟ್ಟು. Show all posts
Showing posts with label ದೇವರೇಂ ಜೀವಕೋಟಿ ಸಮಷ್ಟಿಯನು ಬಿಟ್ಟು. Show all posts

Friday, January 13, 2012

ದೇವರೇಂ ಜೀವಕೋಟಿ ಸಮಷ್ಟಿಯನು ಬಿಟ್ಟು (141)

ದೇವರೇಂ ಜೀವಕೋಟಿ ಸಮಷ್ಟಿಯನು ಬಿಟ್ಟು? |
ಜೀವವೊಂದಿನ್ನೊಂದನರಿತು ಗುರುತಿಸುವಾ ||
ಭಾವನಾ ಸಂಬಂಧ ಶಕ್ತಿ ಸೂತ್ರದ ಮುಂದೆ |
ಆವಸಾಕ್ಷ್ಯವದೇಕೆ ? - ಮರುಳ ಮುನಿಯ || (೧೪೧)

(ಜೀವವು+ಒಂದು+ಇನ್ನೊಂದನು+ಅರಿತು)(ಆವಸಾಕ್ಷ್ಯ+ಅದು+ಏಕೆ)

ಕೋಟ್ಯಾಂತರ ಜೀವಿಗಳ ಸಮುದಾಯವನ್ನು (ಸಮಷ್ಟಿ) ಬಿಟ್ಟು ದೇವರಿರುವನೇನು ? ಒಂದು ಜೀವವು ಮತ್ತೊಂದು ಜೀವವನ್ನು ಅರ್ಥಮಾಡಿಕೊಂಡು ಗುರುತಿಸುವ ಆ ಭಾವನೆಗಳ ಬಾಂಧವ್ಯ ಬಲದ ಮುಂದೆ, ದೇವರ ಇರುವಿಕೆಗೆ ಇನ್ಯಾವ ಸಾಕ್ಷ್ಯಗಳೂ ಬೇಕಿಲ್ಲ.