Showing posts with label ಧಗೆಯಿಂದ ದೆಹಲಿ ಸೊರಗಿರೆ ಬೇಸಿಗೆಯೊಳಂದು. Show all posts
Showing posts with label ಧಗೆಯಿಂದ ದೆಹಲಿ ಸೊರಗಿರೆ ಬೇಸಿಗೆಯೊಳಂದು. Show all posts

Tuesday, December 13, 2011

ಧಗೆಯಿಂದ ದೆಹಲಿ ಸೊರಗಿರೆ ಬೇಸಿಗೆಯೊಳಂದು (122)

ಧಗೆಯಿಂದ ದೆಹಲಿ ಸೊರಗಿರೆ ಬೇಸಿಗೆಯೊಳಂದು |
ಮುಗಿಲು ಶೃಂಗೇರಿಗಭಿಷೇಕವನೆ ಮಾಳ್ಕುಂ ||
ದುಗುಡ ಸೊಗಗಳಿಗೊಂದು ನಂಟುಂಟು ನಯವುಂಟು |
ಮುಗಿಲಹುದೆ ಧಗೆಯಿರದೆ - ಮರುಳ ಮುನಿಯ || (೧೨೨)

(ಬೇಸಿಗೆಯೊಳು+ಅಂದು)(ಶೃಂಗೇರಿಗೆ+ಅಭಿಷೇಕವನೆ)(ಸೊಗಗಳಿಗೆ+ಒಂದು)(ಮುಗಿಲು+ಅಹುದೆ)

ಬೇಸಿಗೆಯ ಬಿಸಿಲಿನ ಝಳದಿಂದ ಉತ್ತರದ ದೆಹಲಿಯು ಬಾಡಿಹೋಗಿರುವಾಗ, ಮೋಡಗಳು ದಕ್ಷಿಣದ ಶೃಂಗೇರಿಗೆ ಅಭಿಷೇಕವನ್ನು ಮಾಡುತ್ತವೆ (ಮಾಳ್ಕುಂ). ಈ ರೀತಿಯಾಗಿ ದುಃಖ (ದುಗುಡ) ಮತ್ತು ಸುಖ (ಸೊಗ)ಗಳಿಗೆ ಒಂದು ವಿಧವಾದ ಸಂಬಂಧ ಮತ್ತು ರೀತಿ ನೀತಿಗಳಿವೆ. ಬಿಸಿಲಿನ ತಾಪ ಮತ್ತು ಝಳಗಳಿರದೆ ಮೋಡವಾಗಲು ಸಾಧ್ಯವಿಲ್ಲ.