Showing posts with label ನಾನಾ ವಿಕಾರ ಲೀಲೆಗಳ ತಾಳುತ್ತ. Show all posts
Showing posts with label ನಾನಾ ವಿಕಾರ ಲೀಲೆಗಳ ತಾಳುತ್ತ. Show all posts

Friday, February 3, 2012

ನಾನಾ ವಿಕಾರ ಲೀಲೆಗಳ ತಾಳುತ್ತ (153)

ನಾನಾ ವಿಕಾರ ಲೀಲೆಗಳ ತಾಳುತ್ತ |
ತಾನೊಬ್ಬನೇ ನಿಶ್ಚಲಂ ಮೆರೆಯುತತ್ತ ||
ಜ್ಞಾನಿಗೇ ತಾನೇಕ ಯೋಗತತ್ತ್ವವನೀವ |
ದಾನಿಯಾ ಬ್ರಹ್ಮನೆಲೊ - ಮರುಳ ಮುನಿಯ || (೧೫೩)

(ಮೆರೆಯುತ+ಅತ್ತ)(ಯೋಗತತ್ತ್ವವನ್+ಈವ)(ಬ್ರಹ್ಮನ್+ಎಲೊ)

ಬಗೆಬಗೆಯ ರೂಪಾಂತರ(ವಿಕಾರ)ಗಳ, ಆಟಗಳನ್ನು ಧರಿಸುತ್ತಾ, ಆದರೆ ತಾನು ಒಬ್ಬ ಮಾತ್ರ ಅಚಲವಾಗಿ (ನಿಶ್ಚಲ) ಮೆರೆಯುತ್ತಾ, ತಿಳುವಳಿಕೆ ಇರುವವನಿಗೆ ಏಕತಾಭಾವದ ಯೊಗದ ಸಿದ್ಧಾಂತವನ್ನು ನೀಡುವ ದಾನಿ, ಈ ಬ್ರಹ್ಮನೆನ್ನುವನು.