Showing posts with label ನಾನು ನಾನೆನುವ ನಿನ್ನಂತರಾತ್ಮದ ಗಂಗೆ. Show all posts
Showing posts with label ನಾನು ನಾನೆನುವ ನಿನ್ನಂತರಾತ್ಮದ ಗಂಗೆ. Show all posts

Wednesday, March 28, 2012

ನಾನು ನಾನೆನುವ ನಿನ್ನಂತರಾತ್ಮದ ಗಂಗೆ (183)

ನಾನು ನಾನೆನುವ ನಿನ್ನಂತರಾತ್ಮದ ಗಂಗೆ |
ನಾನಾ ಪ್ರಪಂಚಾಂತರಾತ್ಮ ಸಾಗರದಿ ||
ಲೀನವಹ ಸಂಗಮ ಸ್ಥಾನ ದೈವ ಪ್ರತಿಮೆ |
ಧ್ಯಾನಸಂಧಾನವದು - ಮರುಳ ಮುನಿಯ || (೧೮೩)

(ನಾನ್+ಎನುವ)(ನಿನ್ನ+ಅಂತರಾತ್ಮದ)(ಪ್ರಪಂಚ+ಅಂತರಾತ್ಮ)(ಲೀನ+ಅಹ)

ನಾನು ನಾನೇ ಎನ್ನುವ ಅಂತರಾತ್ಮದಲ್ಲಿರುವ ಪವಿತ್ರವಾದ ಜಲವನ್ನು, ಪ್ರಪಂಚದ ವಿಧವಿಧವಾದ ಅಂತರಾತ್ಮಗಳೆಂಬ ಸಮುದ್ರದಲ್ಲಿ, ಸೇರಿಸುವ ಸ್ಥಳವೇ ದೇವರ ವಿಗ್ರಹ ಆಗಿದೆ. ಇದನ್ನು ಧ್ಯಾನದ ಹೊಂದಾಣಿಕೆಯಿಂದ ತಿಳಿಯಬಹುದು.