Showing posts with label ನಿತ್ಯ ಮಂಗಳವಿರಲಿ ನಿತ್ಯ ಸಂರಸವಿರಲಿ. Show all posts
Showing posts with label ನಿತ್ಯ ಮಂಗಳವಿರಲಿ ನಿತ್ಯ ಸಂರಸವಿರಲಿ. Show all posts

Tuesday, September 27, 2011

ನಿತ್ಯ ಮಂಗಳವಿರಲಿ ನಿತ್ಯ ಸಂರಸವಿರಲಿ (74)


ನಿತ್ಯ ಮಂಗಳವಿರಲಿ ನಿತ್ಯ ಸಂರಸವಿರಲಿ |
ನಿತ್ಯವೆದೆಯಿರಲಿ ತಾಳಲಿಕೆ - ತಳ್ಳಲಿಕೆ ||
ಸತ್ಯ ನಿನಗಂತರಾತ್ಮಜ್ಯೋತಿ ಬೆಳಗಿರಲಿ |
ಸತ್ಯ ಜಯ ಧರ್ಮ ಜಯ - ಮರುಳ ಮುನಿಯ || (೭೪)

(ಮಂಗಳ+ಇರಲಿ)(ಸಂತಸ+ಇರಲಿ)(ಸತ್ಯ+ಎದೆ+ಇರಲಿ)(ನಿನಗೆ+ಅಂತರಾತ್ಮ)

ಪ್ರತಿದಿನವೂ ನಿನಗೆ ಶುಭ ಮತ್ತು ಒಳಿತಾಗಲಿ. ಪ್ರತಿದಿನವೂ ಸಂತೋಷವಿರಲಿ. ಈ ಜಗತ್ತಿನ ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ಸಹಿಸಲು ಮತ್ತು ಅವುಗಳನ್ನು ಮಾಡನ್ನು ನಿನಗೆ ಗಟ್ಟಿ ಎದೆ ಇರಲಿ. ನಿನ್ನ ಅಂತರಾತ್ಮದ ಬೆಳಕು ಪರಮಾತ್ಮನ ತತ್ತ್ವದಿಂದ ಹೊಳೆಯುತ್ತಿರಲಿ. ಸತ್ಯ ಮತ್ತು ಧರ್ಮಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ.