Showing posts with label ನಿರಹಂತೆ ನಿಜಕರ್ಮ ನಿತ್ಯ ಸಂತೋಷಮಿವು. Show all posts
Showing posts with label ನಿರಹಂತೆ ನಿಜಕರ್ಮ ನಿತ್ಯ ಸಂತೋಷಮಿವು. Show all posts

Tuesday, May 29, 2012

ನಿರಹಂತೆ ನಿಜಕರ್ಮ ನಿತ್ಯ ಸಂತೋಷಮಿವು (214)

ನಿರಹಂತೆ ನಿಜಕರ್ಮ ನಿತ್ಯ ಸಂತೋಷಮಿವು |
ವರಲಕ್ಷಣಂ ಸಹಜ ಸರ್ವ ಧರ್ಮಕ್ಕಂ ||
ಚರಿಸು ನೀನದನು ಬಿಡದನುದಿನದ ಜೀವನದಿ |
ಪರಮಗತಿಯದರಿಂದೆ - ಮರುಳ ಮುನಿಯ || (೨೧೪)

(ಸಂತೋಷಂ+ಇವು)(ನೀನ್+ಅದನು)(ಬಿಡದೆ+ಅನುದಿನದ)(ಪರಮಗತಿ+ಅದರಿಂದೆ)

ಅಹಂಭಾವವಿಲ್ಲದಿರುವುದು ಮತ್ತು ಸ್ವಧರ್ಮವನ್ನು ಪಾಲಿಸುವುದು ನಿನಗೆ ಪ್ರತಿನಿತ್ಯದ ಸುಖ ಮತ್ತು ಸಂತೋಷಗಳನ್ನು ಕೊಡುತ್ತದೆ. ಇವು ಎಲ್ಲಾ ಧರ್ಮಗಳಿಗೂ ಸಹಜವಾಗಿರುವ ಶ್ರೇಷ್ಠವಾದ ಲಕ್ಷಣಗಳು. ಆದ್ದರಿಂದ ನೀನು ಅವುಗಳನ್ನು ನಿನ್ನ ಜೀವನದಲ್ಲಿ ಸದಾಕಾಲವೂ ಆಚರಿಸು. ಇದರಿಂದ ನೀನು ಮೋಕ್ಷವನ್ನು ಹೊಂದುತ್ತೀಯೆ.