Showing posts with label ನೃತ್ಯ ಲೀಲೆಯ ತೋರ‍್ಪ ಸತ್ತ್ವವದು ಸೌಂದರ್ಯ. Show all posts
Showing posts with label ನೃತ್ಯ ಲೀಲೆಯ ತೋರ‍್ಪ ಸತ್ತ್ವವದು ಸೌಂದರ್ಯ. Show all posts

Friday, September 30, 2011

ನೃತ್ಯ ಲೀಲೆಯ ತೋರ‍್ಪ ಸತ್ತ್ವವದು ಸೌಂದರ್ಯ (77)


ನೃತ್ಯ ಲೀಲೆಯ ತೋರ‍್ಪ ಸತ್ತ್ವವದು ಸೌಂದರ್ಯ |
ನಿತ್ಯ ನಿಶ್ಚಲಮಿರ‍್ಪ ಸತ್ತ್ವವದು ಸತ್ಯ ||
ಸತ್ಯ ಸೌಂದರ್ಯಗಳ್ ಬ್ರಹ್ಮಮಾಯೆಗಳೊಡಲು |
ಪ್ರತ್ಯೇಕಮವರಿರರೊ - ಮರುಳ ಮುನಿಯ || (೭೭)

(ಸತ್ತ್ವ+ಅದು)(ನಿಶ್ಚಲಂ+ಇರ‍್ಪ)(ಬ್ರಹ್ಮಮಾಯೆಗಳ್+ಒಡಲು)(ಪ್ರತ್ಯೇಕಂ+ಅವರ್+ಇರರೊ)

ನಾಟ್ಯದ ಆಟವನ್ನು ತೋರಿಸುವ ಸಾರವೇ ಸೌಂದರ್ಯ. ಯಾವಾಗಲೂ ಅಚಲವಾಗಿರುವ ಸಾರವನ್ನೇ ಸತ್ಯ ಎನ್ನುವುದು. ಸತ್ಯ ಮತ್ತು ಸೌಂದರ್ಯಗಳು ಬ್ರಹ್ಮ ಮಾಯೆಯ ದೇಹ. ಇವು ಬೇರೆ ಬೇರೆಯಾಗಿ ಇರಲಾರವು.