Showing posts with label ಪರಿಪರಿಯ ಮೃಷ್ಟಾನ್ನ ಭಕ್ಷ್ಯಭೋಜ್ಯಗಳು ತಾ. Show all posts
Showing posts with label ಪರಿಪರಿಯ ಮೃಷ್ಟಾನ್ನ ಭಕ್ಷ್ಯಭೋಜ್ಯಗಳು ತಾ. Show all posts

Wednesday, March 14, 2012

ಪರಿಪರಿಯ ಮೃಷ್ಟಾನ್ನ ಭಕ್ಷ್ಯಭೋಜ್ಯಗಳು ತಾ (175)

ಪರಿಪರಿಯ ಮೃಷ್ಟಾನ್ನ ಭಕ್ಷ್ಯಭೋಜ್ಯಗಳು ತಾ-|
ವರಗಿ ರಕ್ತದಿ ಬೆರೆಯದಿರೆ ಪೀಡೆ ಪೊಡೆಗೆ ||
ಬರಿಯೋದು ಬರಿತರ್ಕ ಬರಿಭಕ್ತಿಗಳುಮಂತು |
ಹೊರೆಯೆ ಅರಿವಾಗದೊಡೆ - ಮರುಳ ಮುನಿಯ || (೧೭೫)

(ತಾವ್+ಅರಗಿ)(ಬೆರೆಯದೆ+ಇರೆ)(ಬರಿಭಕ್ತಿಗಳುಂ+ಅಂತು)(ಅರಿವು+ಆಗದೊಡೆ)

ಬಗೆಬಗೆಯ ರಸದೂಟಗಳನ್ನು ಕೂಡಿದ ತಿಂಡಿ, ತಿನಿಸುಗಳು, ನಾವು ತಿಂದನಂತರ ಜೀರ್ಣವಾಗಿ ನಮ್ಮ ರಕ್ತದಲ್ಲಿ ಸೇರದಿದ್ದಲ್ಲಿ, ಅವು ಹೊಟ್ಟೆಗೆ(ಪೊಡೆಗೆ) ಹಿಂಸೆ(ಪೀಡೆ)ಗಳನ್ನು ಮಾಡುತ್ತದೆ. ಹಾಗೆಯೇ ಕೇವಲ ಓದು, ತರ್ಕ ಮತ್ತು ಭಕ್ತಿಗಳೂ ಸಹ ಸಾರ್ಥಕ ರೀತಿಯಲ್ಲಿ ತಮ್ಮ ತಿಳುವಳಿಕೆಗೆ ನಿಲುಕದಿದ್ದರೆ ಅವು ಒಂದು ಬಾರವಾಗುತ್ತದೆಯೇ ಹೊರತು ಅವುಗಳಿಂದ ನಮಗಿನ್ಯಾವ ಪ್ರಯೋಜನವೂ ಆಗುವುದಿಲ್ಲ.