Showing posts with label ಪುನರುಕ್ತಿ ಬಾರದೆಂದು ಪ್ರಕೃತಿ ಕಂಠದಿಂ. Show all posts
Showing posts with label ಪುನರುಕ್ತಿ ಬಾರದೆಂದು ಪ್ರಕೃತಿ ಕಂಠದಿಂ. Show all posts

Friday, December 9, 2011

ಪುನರುಕ್ತಿ ಬಾರದೆಂದು ಪ್ರಕೃತಿ ಕಂಠದಿಂ (120)

ಪುನರುಕ್ತಿ ಬಾರದೆಂದುಂ ಪ್ರಕೃತಿ ಕಂಠದಿಂ  |
ದಿನದಂತೆ ದಿನವಿರದದೊರ‍್ವನಿನನಿರೆಯುಂ ||
ಇನನೆ ತಾಂ ಕ್ಷಣದಿಂ ಮರುಕ್ಷಣಕೆ ಸವೆಯುವನು |
ಅನಿತರತೆ ಮೇಲ್ತೋರ‍್ಕೆ - ಮರುಳ ಮುನಿಯ || (೧೨೦)

(ದಿನ+ಇರದು+ಅದು+ಒರ‍್ವನ್+ಇನನ್+ಇರೆಯುಂ)

ಪ್ರಕೃತಿಯ ಕೊರಳಿನಿಂದ ಎಂದೆಂದಿಗೂ ಅದೇ ಮಾತು ಬರಲಾರದು. ಸೂರ್ಯ(ಇನ)ನೊಬ್ಬನೆ ಆದರೂ ಒಂದು ದಿನದಂತೆ ಇನ್ನೊಂದು ದಿನವಿರುವುದಿಲ್ಲ. ಸೂರ್ಯನೂ ಸಹ ಕ್ಷಣದಿಂದ ಕ್ಷಣಕ್ಕೂ ಕ್ಷೀಣಿಸುತ್ತಿರುತ್ತಾನೆ. ಅದು ಸವೆಯದಂತಿರುವುದು ಮೇಲ್ನೋಟಕ್ಕೆ ಮಾತ್ರ ಕಾಣುತ್ತದೆ.