Showing posts with label ಪ್ರಕಟರಂಗದೊಳಾರು ನಿಜ ಬಾಲರನು ವಿವಿಧ. Show all posts
Showing posts with label ಪ್ರಕಟರಂಗದೊಳಾರು ನಿಜ ಬಾಲರನು ವಿವಿಧ. Show all posts

Friday, June 24, 2011

ಪ್ರಕಟರಂಗದೊಳಾರು ನಿಜ ಬಾಲರನು ವಿವಿಧ (30)

ಪ್ರಕಟರಂಗದೊಳಾರು ನಿಜ ಬಾಲರನು ವಿವಿಧ |
ವಿಕಲ ಪಾತ್ರದ ನಟನೆಯಾಡುವುದ ನೋಡಿ ||
ಸಕಲ ತಾನಿರುತ ಗೂಢದಲಿ ನಲಿಯುತ್ತಲಿಹ |
ವಿಕಟರಸಿಕಂಗೆ ನಮೊ -ಮರುಳ ಮುನಿಯ || (೩೦)

(ಪ್ರಕಟರಂಗದ+ಒಳು+ಆರು)(ನಟನೆ+ಆಡುವುದ)(ತಾನ್+ಇರುತ)(ನಲಿಯುತ್ತಲ್+ಇಹ)


ಈ ಪ್ರಪಂಚ ಒಂದು ನಾಟಕವನ್ನು ಪ್ರದರ್ಶಿಸುವ ಸ್ಥಳ. ಪ್ರಕಾಶಕ್ಕೆ ಬಂದಿರುವ ಈ ನಾಟಕರಂಗದಲ್ಲಿ ತನ್ನ ಸ್ವಂತ ಮಕ್ಕಳ ವಿಧವಿಧವಾದ ಅಪೂರ್ಣವಾದ (ವಿಕಲ) ಪಾತ್ರಗಳ ನಟನೆಯನ್ನು ನೋಡಿ, ತಾನು ಎಲ್ಲದರಲ್ಲಿಯೂ ರಹಸ್ಯವಾಗಿರುತ್ತ ಆನಂದದಿಂದಿರುವ, ವ್ಯಂಗದಿಂದ ಕೂಡಿರುವ ರಸಿಕನಿಗೆ ನಮಸ್ಕಾರ (ನಮೋ).