Showing posts with label ಪ್ರಾಪಂಚಿಕದ ಚಕ್ರ ಪರಿವರ್ತನ ಕ್ರಮಗ. Show all posts
Showing posts with label ಪ್ರಾಪಂಚಿಕದ ಚಕ್ರ ಪರಿವರ್ತನ ಕ್ರಮಗ. Show all posts

Monday, October 31, 2011

ಪ್ರಾಪಂಚಿಕದ ಚಕ್ರ ಪರಿವರ್ತನ ಕ್ರಮಗ (93)

ಪ್ರಾಪಂಚಿಕದ ಚಕ್ರ ಪರಿವರ್ತನ ಕ್ರಮಗ-|
ಳಾಪಾತ ನಿಯತಂಗಳಾಳವರಿತವರಾರ್ ||
ಮಾಪನಾತೀತನಿತ್ಯಸ್ವೈರಸೂತ್ರದಿಂ |
ವ್ಯಾಪಿತಂ ಜಗವೆಲ್ಲ - ಮರುಳ ಮುನಿಯ || (೯೩)


(ಕ್ರಮಗಳ್+ಅಪಾತ)(ನಿಯತಂಗಳ+ಆಳವ+ಅರಿತವರಾರ್)(ಮಾಪನ+ಅತೀತನಿತ್ಯ+ಸ್ವೈರಸೂತ್ರದಿಂ)


ಜಗತ್ತಿನ ಚಕ್ರದ ಸುತ್ತುವಿಕೆಯ ಕ್ರಮಗಳ ಆಗುವಿಕೆ(ಆಘಾತ)ಯ ನಿಯಮ(ನಿಯತ)ಗಳ ಆಳವನ್ನು ತಿಳಿಯದವರು ಯಾರಾದರೂ ಇರುವರೇನು ? ಅಳತೆ(ಮಾಪನ)ಗೆ ಸಿಗದಿರುವ (ಅತೀತ) ಸದಾಕಾಲವೂ ಇರುವ ಸ್ವತಂತ್ರ (ಸ್ವೈರ) ನಿಯಮಗಳಿಂದ ಈ ಜಗತ್ತು ಹಬ್ಬಿಕೊಂಡಿದೆ (ವ್ಯಾಪಕಂ).