Showing posts with label ಬತ್ತ ಗೊಬ್ಬರವಾಗಿ ನೆಲಕಿಳಿದು ಮಣ್ಣಾಗಿ. Show all posts
Showing posts with label ಬತ್ತ ಗೊಬ್ಬರವಾಗಿ ನೆಲಕಿಳಿದು ಮಣ್ಣಾಗಿ. Show all posts

Friday, August 19, 2011

ಬತ್ತ ಗೊಬ್ಬರವಾಗಿ ನೆಲಕಿಳಿದು ಮಣ್ಣಾಗಿ (55)


ಬತ್ತ ಗೊಬ್ಬರವಾಗಿ ನೆಲಕಿಳಿದು ಮಣ್ಣಾಗಿ |
ಮತ್ತೆ ತಾಂ ತೆನೆಯೊಳೇಳ್ವಂತೆ ನರಕುಲದ ||
ಸತ್ತ್ವ ಕಣವಿಲ್ಲಲ್ಲಿ ತಮಕಿಳಿದೊಡಂ ತಾನೆ |
ಮತ್ತೆದ್ದು ಮೆರೆಯುವುದು - ಮರುಳ ಮುನಿಯ || (೫೫)

(ಗೊಬ್ಬರ+ಆಗಿ)(ನೆಲಕೆ+ಇಳಿದು)(ಮಣ್+ಆಗಿ)(ತೆನೆಯ+ಒಳು+ಏಳ್ವಂತೆ)
(ಕಣವು+ಇಲ್ಲಿ+ಅಲ್ಲಿ)(ತಮಕೆ+ಇಳಿದೊಡಂ)(ಮತ್ತೆ+ಎದ್ದು)

ಭತ್ತವು ಹೇಗೆ ಗೊಬ್ಬರವಾಗಿ ನೆಲದೊಳಕ್ಕಿಳಿದು ಮಣ್ಣಾಗಿ ಪುನಃ ಭತ್ತದ ತೆನೆಯಾಗಿ ವಿಜೃಂಭಿಸುವುದೋ, ಹಾಗೆಯೇ ಮನುಷ್ಯ ಕುಲದ ಸತ್ತ್ವದ ಕಣವು ಅಲ್ಲಲ್ಲಿ ಪೂರ್ತಿಯಾಗಿ ಕಾಣದಂತೆ ಕೆಳಕ್ಕೆ (ತಮಕೆ) ಇಳಿದರೆ ತಾನೆ ಅದು ಪುನಃ ಎದ್ದು ಮೆರೆಯಲು ಸಾಧ್ಯ.