Showing posts with label ಬರಿಯ ಕಣ್ಣಿಂದಣುವ ಪರಿಕಿಪನೆ ವಿಜ್ಞಾನಿ. Show all posts
Showing posts with label ಬರಿಯ ಕಣ್ಣಿಂದಣುವ ಪರಿಕಿಪನೆ ವಿಜ್ಞಾನಿ. Show all posts

Wednesday, December 28, 2011

ಬರಿಯ ಕಣ್ಣಿಂದಣುವ ಪರಿಕಿಪನೆ ವಿಜ್ಞಾನಿ (131)

ಬರಿಯ ಕಣ್ಣಿಂದಣುವ ಪರಿಕಿಪನೆ ವಿಜ್ಞಾನಿ |
ಕರಣವಾತಂಗೆ ಸೂಕ್ಷ್ಮದ ಕಾಚಯಂತ್ರ ||
ವಿರಚಿಸಿಕೊ ನೀನಂತರಂಗಯಂತ್ರವನಂತು |
ಪರತತ್ತ್ವ ದರ್ಶನಕೆ - ಮರುಳ ಮುನಿಯ || (೧೨೧)

(ಕಣ್ಣಿಂದ+ಅಣುವ)(ಕರಣವು+ಆತಂಗೆ)(ನೀನ್+ಅಂತರಂಗಯಂತ್ರವಂ+ಅಂತು)

ಬರಿಯ ಕಣ್ಣಿನಿಂದ ಒಂದು ಅತಿ ಸೂಕ್ಷ್ಮವಾದ ವಸ್ತುವನ್ನು (ಅಣು) ವಿಜ್ಞಾನಿಯು ಪರೀಕ್ಷಿಸಲು ಸಾಧ್ಯವೇನು? ಸೂಕ್ಷ್ಮವಾದ ಗಾಜಿ(ಕಾಚ)ನ ಉಪಕರಣ ಅಣುವನ್ನು ಪರೀಕ್ಷಿಸಲು ಅವನಿಗೆ ಸಾಧನ. ನೀನೂ ಸಹ ನಿನ್ನ ಅಂತರಂಗಯಂತ್ರವನ್ನು ಆ ರೀತಿ ನಿರ್ಮಿಸಿಕೊಂಡಲ್ಲಿ ಪರಮಾತ್ಮನ ದರ್ಶನವನ್ನು ಮಾಡಲು ಸಾಧ್ಯ.