Showing posts with label ಭುವನ ಜೀವನವೆಲ್ಲ ಶಿವನ ಲೀಲಾರಂಗ. Show all posts
Showing posts with label ಭುವನ ಜೀವನವೆಲ್ಲ ಶಿವನ ಲೀಲಾರಂಗ. Show all posts

Thursday, November 17, 2011

ಭುವನ ಜೀವನವೆಲ್ಲ ಶಿವನ ಲೀಲಾರಂಗ (105)


ಭುವನ ಜೀವನವೆಲ್ಲ ಶಿವನ ಲೀಲಾರಂಗ |
ಅವನು ಶಿವನಿವನು ಶಿವ ಶಿವ ನೀನು ನಾನು ||
ತವಕಪಡಿಸುವ ನಮ್ಮ ಕೆರಳಿಸುವ ಕುಣಿಯಿಸುವ |
ಭವವೆಲ್ಲ ಶಿವಲೀಲೆ - ಮರುಳ ಮುನಿಯ || (೧೦೫)

(ಜೀವನ+ಎಲ್ಲ)(ಶಿವನ್+ಇವನು)(ಭವ+ಎಲ್ಲ)

ಈ ಜಗತ್ತಿ(ಭುವನ)ನ ಜೀವನವೆಲ್ಲವೂ ಪರಮಾತ್ಮನ ವಿಹಾರದ ಸ್ಥಳ. ಅವನೂ ಪರಮಾತ್ಮ ಇವನೂ ಪರಮಾತ್ಮ. ನಾನು, ನೀನುಗಳೆಲ್ಲರೂ ಪರಮಾತ್ಮನೇ ಅಹುದು. ನಮ್ಮಗಳನ್ನು ಉತ್ಸಾಹಗೊಳಿಸುವ, ಕನಲಿಸುವ ಮತ್ತು ಕುಣಿಯಿಸುವ ಪ್ರಾಪಂಚಿಕ ವ್ಯವಹಾರ(ಭವ)ಗಳೆಲ್ಲವೂ ಆ ಪರಮಾತ್ಮನ ಆಟವೇ ಸರಿ.