Showing posts with label ಭೇದದ ಭ್ರಾಂತಿಯಿರೆ ಜೀವಕ್ಕೆ ಜಗತ್ಸಂಗ. Show all posts
Showing posts with label ಭೇದದ ಭ್ರಾಂತಿಯಿರೆ ಜೀವಕ್ಕೆ ಜಗತ್ಸಂಗ. Show all posts

Tuesday, December 20, 2011

ಭೇದದ ಭ್ರಾಂತಿಯಿರೆ ಜೀವಕ್ಕೆ ಜಗತ್ಸಂಗ (127)

ಭೇದದ ಭ್ರಾಂತಿಯಿರೆ ಜೀವಕ್ಕೆ ಜಗತ್ಸಂಗ |
ವೇದನೆಗಳಂತುದಿಸಿ ಮಾಯೆ ತೂಂಕಿಡುವಾ ||
ಖೇದ ಮೋದಾಂದೋಲನಗಳಿನಾತ್ಮೋದ್ಬೋಧ |
ಬೋಧೆಯಿಂ ಭ್ರಾಂತಿಲಯ - ಮರುಳ ಮುನಿಯ || (೧೨೬)

(ವೇದನೆಗಳ+ಅಂತು+ಉದಿಸಿ)(ಮೋದ+ಆಂದೋಲನಗಳಿನ್+ಆತ್ಮ+ಉದ್+ಬೋಧ)

ಜಗತ್ತಿನಲ್ಲಿ ಜೀವಿಸುತ್ತಿರುವ ಜೀವಿಗಳಿಗೆ ಈ ಜಗತ್ತಿನ ಸಹವಾಸವೇ ಬೇರೆ ಮತ್ತು ತಾವೇ ಬೇರೆ ಎಂಬ ತಪ್ಪು ಗ್ರಹಿಕೆ ಇರುವಾಗ, ನೋವು (ವೇದನೆ)ಗಳನ್ನು ಹಾಗೆ ಹುಟ್ಟುವಂತೆ (ಉದಿಸಿ) ಮಾಡಿ, ಮಾಯೆಯು ಇಳಬಿಡುವ (ತೂಂಕಿಡುವ) ದುಃಖ ಮತ್ತು ಸಂತೋಷಗಳ ತೂಗಾಡುವಿಕೆ(ಆಂದೋಲನ)ಯಿಂದ ಆತ್ಮ ಜಾಗೃತಗೊಳ್ಳುತ್ತದೆ. ಈ ಜಾಗೃತಿಯಿಂದ ತಪ್ಪುಗ್ರಹಿಕೆ (ಭ್ರಾಂತಿ)ಯ ನಾಶ(ಲಯ)ವಾಗುತ್ತದೆ.