Showing posts with label ಮನುಜ ಗಾತ್ರ ವ್ಯಕ್ತಿಯೊಳಮಿರ‍್ಪುದನುಪೂರ್ವಿ. Show all posts
Showing posts with label ಮನುಜ ಗಾತ್ರ ವ್ಯಕ್ತಿಯೊಳಮಿರ‍್ಪುದನುಪೂರ್ವಿ. Show all posts

Thursday, May 24, 2012

ಮನುಜ ಗಾತ್ರ ವ್ಯಕ್ತಿಯೊಳಮಿರ‍್ಪುದನುಪೂರ್ವಿ (211)

ಮನುಜ ಗಾತ್ರ ವ್ಯಕ್ತಿಯೊಳಮಿರ‍್ಪುದನುಪೂರ್ವಿ |
ಕಣವೊಂದರಿಂ ಭ್ರೂಣ ಪಿಂಡಾಂಗ ವಿವೃತಿ ||
ಜನಿಪುವದರಿಂ ಲೋಮ ನಖ ದಂತ ಶುಕ್ರಗಳು |
ತನುವೃದ್ಧಿಯುಂ ಕ್ರಮದೆ - ಮರುಳ ಮುನಿಯ || (೨೧೧)

(ವ್ಯಕ್ತಿಯೊಳಂ+ಇರ‍್ಪುದ+ಅನುಪೂರ್ವಿ)(ಪಿಂಡ+ಅಂಗ)(ಜನಿಪುವು+ಅದರಿಂ)

ಮನುಷ್ಯನ ದೇಹದಲ್ಲಿ ವ್ಯವಸ್ಥಿತವಾಗಿ ಬಂದಿರುವ ಸೂಕ್ಷ್ಮಕಣ ಒಂದರಿಂದ ಪ್ರತಿವ್ಯಕ್ತಿಯಲ್ಲಿ ಭ್ರೂಣ ಮತ್ತು ಪಿಂಡಗಳು ಒಂದಾದನಂತರ ಒಂದು ಬರುತ್ತವೆ. ಅದರಿಂದ ದೇಹದ ಮೇಲಿನ ಕೂದಲುಗಳು (ಲೋಮ), ಉಗುರು(ನಖ), ಹಲ್ಲು (ದಂತ) ಮತ್ತು ಶುಕ್ಲಶೋಣಿತ(ಶುಖ)ಗಳು ಹುಟ್ಟುತ್ತವೆ. ಈ ರೀತಿಯಾಗಿ ದೇಹದ ಬೆಳವಣಿಗೆಯು (ತನುವೃದ್ಧಿ) ಒಂದು ಕ್ರಮದಲ್ಲಿ ಆಗುತ್ತದೆ.