Showing posts with label ಮುನಿ ವಸಿಷ್ಠನ ಪತ್ನಿಯುಡುಪಥದೊಳಿರುವಂತೆ. Show all posts
Showing posts with label ಮುನಿ ವಸಿಷ್ಠನ ಪತ್ನಿಯುಡುಪಥದೊಳಿರುವಂತೆ. Show all posts

Friday, June 1, 2012

ಮುನಿ ವಸಿಷ್ಠನ ಪತ್ನಿಯುಡುಪಥದೊಳಿರುವಂತೆ (217)

ಮುನಿ ವಸಿಷ್ಠನ ಪತ್ನಿಯುಡುಪಥದೊಳಿರುವಂತೆ |
ಮನದ ಗವಿಯಾಳದೊಳಗಾತುಮದ ಸೊಡರು ||
ಮಿನುಗುತಿರ‍್ಪುದು ನೋಡು ದರ್ಶನೈಕಾಗ್ರ್ಯದಿಂ |
ನೆನೆದದನು ಬಲವ ಪಡೆ - ಮರುಳ ಮುನಿಯ || (೨೧೭)

(ಪತ್ನಿ+ಉಡುಪಥದೊಳ್+ಇರುವಂತೆ)(ಗವಿ+ಆಳದ+ಒಳಗೆ+ಆತುಮದ)(ಮಿನುಗುತ+ಇರ‍್ಪುದು)(ದರ್ಶನ+ಏಕಾಗ್ರ್ಯದಿಂ)(ನೆನೆದು+ಅದನು)

ವಸಿಷ್ಠಋಷಿಯ ಪತ್ನಿಯಾದ ಅರುಂಧತಿಯು ನಕ್ಷತ್ರವಾಗಿ, ಆಕಾಶ(ಉಡುಪಥ)ದಲ್ಲಿರುವಂತೆ, ಮನಸ್ಸಿನ ಗುಹೆ(ಗವಿ)ಯ ಒಳಗಡೆ ಆತ್ಮದ ದೀಪ(ಸೊಡರು)ವು ಉರಿಯುತ್ತಿರುತ್ತದೆ. ಏಕಾಗ್ರತೆ(ಏಕಾಗ್ರ್ಯ)ಯಿಂದ ಅದು ಹೊಳೆಯುತ್ತಿರುವುದನ್ನು ನೋಡಬಹುದು. ಈ ವಿಚಾರವನ್ನು ನೆನಪಿಸಿಕೊಳ್ಳುತ್ತಾ ನೀನು ಶಕ್ತಿಯನ್ನು ಪಡೆ.