Showing posts with label ರಸನೆಯನು ಕೆರಳಿಪನಿತುಂಟು ರುಚಿ ನಿನ್ನಯಾ. Show all posts
Showing posts with label ರಸನೆಯನು ಕೆರಳಿಪನಿತುಂಟು ರುಚಿ ನಿನ್ನಯಾ. Show all posts

Monday, December 5, 2011

ರಸನೆಯನು ಕೆರಳಿಪನಿತುಂಟು ರುಚಿ ನಿನ್ನಯಾ (116)


ರಸನೆಯನು ಕೆರಳಿಪನಿತುಂಟು ರುಚಿ ನಿನ್ನಯಾ |
ಹಸಿವ ತೀರಿಪ್ಪುದಾರತೆಯಿಲ್ಲ ಜಗದಿ ||
ವಿಷಮವಿರದೊಡೆ ಧಾತುಗಳ್ ಜಗದಿ ಸೃಷ್ಟಿಯಾ |
ಕಸಬು ಸಾಗುವುದೆಂತೊ - ಮರುಳ ಮುನಿಯ || (೧೧೬)

(ಕೆರಳಿಪ+ಅನಿತು+ಉಂಟು)(ತೀರಿಪ್ಪ+ಉದಾರತೆಯಿಲ್ಲ)(ವಿಷಮ+ಇರದೊಡೆ)

ಪ್ರಪಂಚದಲ್ಲಿರುವ ಬಗೆಬಗೆಯಾದ ರುಚಿಗಳು ನಿನ್ನ ನಾಲಿಗೆಯನ್ನು ಕೆರಳಿಸಿದರೂ, ನಿನ್ನ ಹಸಿವನ್ನು ಪರಿಹರಿಸುವಂತಹ ಉದಾರತೆ ಈ ಜಗತ್ತಿಗಿಲ್ಲ. ಅದನ್ನು ನೀನೇ ಪೂರೈಸಿಕೊಳ್ಳಬೇಕು. ಪ್ರಪಂಚದಲ್ಲಿ ಸೃಷ್ಟಿಸಲ್ಪಟ್ಟಿರುವ ಮೂಲವಸ್ತುಗಳೆಲ್ಲವೂ ಅಸಮವಾಗಿರದಿದ್ದಲ್ಲಿ, ಎಂದರೆ ಎಲ್ಲವೂ ಸಮವಾಗಿದ್ದರೆ ಬ್ರಹ್ಮಸೃಷ್ಟಿಯ ಜಗತ್ತಿನಲ್ಲಿ ಯಾವ ವಿಧವಾದ ಕೆಲಸಗಳೂ ಸಾಧ್ಯವಿಲ್ಲ.