Showing posts with label ಲೀನವಿಹವೀಶನಲಿ ಸತ್ಯಗಳು ಮಿಥ್ಯೆಗಳು. Show all posts
Showing posts with label ಲೀನವಿಹವೀಶನಲಿ ಸತ್ಯಗಳು ಮಿಥ್ಯೆಗಳು. Show all posts

Monday, July 25, 2011

ಲೀನವಿಹವೀಶನಲಿ ಸತ್ಯಗಳು ಮಿಥ್ಯೆಗಳು (41)

ಲೀನವಿಹವೀಶನಲಿ ಸತ್ಯಗಳು ಮಿಥ್ಯೆಗಳು |
ಮಾನಗಳು ಮೇಯಗಳು ಪ್ರಕೃತಿ ಮಾಯೆಗಳು ||
ಭಾನಗಳಭಾನಗಳು ಪೂಜ್ಯಗಳಪೂಜ್ಯಗಳು |
ಸೂನೃತಗಳಘಬೀಜ - ಮರುಳ ಮುನಿಯ || (೪೧)



‎(ಲೀನ+ಇಹುವು+ಈಶನಲಿ)(ಭಾನುಗಳು​+ಅಭಾನಗಳು)(ಪೂಜ್ಯಗಳು+ಅಪೂಜ್ಯಗ​ಳು)(ಸೂನೃತಗಳ+ಅಘಬೀಜ)

ಪರಮಾತ್ಮನಲಿ ನಿಜ ಮತ್ತು ಸುಳ್ಳು(ಮಿಥ್ಯೆ)ಗಳು, ಅಳತೆ(ಮಾನ)ಗಳು, ಜ್ಞಾನ(ಭಾನ) ಮತ್ತು ಅಜ್ಞಾನಗಳು (ಅಭಾನಗಳು), ಪೂಜಿಸಲ್ಪಡತಕ್ಕುವು ಮತ್ತು ಪೂಜಿಸಲ್ಪಡಬಾರದವು ಸೇರಿಹೋಗಿವೆ. ಅವನು ಹೀಗೆ ಸತ್ಯವೂ ಹಿತವೂ ಆದ ಪುಣ್ಯ (ಸೂನೃತ) ಮತ್ತು ಪಾಪಗಳ (ಅಘ) ಉತ್ಪತ್ತಿಸ್ಥಾನಕಾರ(ಬೀಜ)ನಾಗಿರ​ುವನು.