Showing posts with label ಲೀಲೆಗೆಂದೀಜಗವ ರಚಿಸಿ ಲೀಲೆಗೆ ತಾನೆ. Show all posts
Showing posts with label ಲೀಲೆಗೆಂದೀಜಗವ ರಚಿಸಿ ಲೀಲೆಗೆ ತಾನೆ. Show all posts

Tuesday, June 28, 2011

ಲೀಲೆಗೆಂದೀಜಗವ ರಚಿಸಿ ಲೀಲೆಗೆ ತಾನೆ (31)

ಲೀಲೆಗೆಂದೀಜಗವ ರಚಿಸಿ ಲೀಲೆಗೆ ತಾನೆ |
ಮೂಲಾದಿಯೆನಿಪವೋಲ್ ನಾಮರೂಪಗಳ ||
ಚೀಲಂಗಳೊಳ್ಗವಿತು ಜಗವ ವೀಕ್ಷಿಸುತಿರ‍್ಪ |
ಪಾಲಕನ ನೆನೆ ಮಣಿದು - ಮರುಳ ಮುನಿಯ || (೩೧)

(ಲೀಲೆಗೆ+ಎಂದು+ಈ+ಜಗವ)(ಮೂಲ+ಆದಿ+ಎನಿಪವೋಲ್)(ಚೀಲಂಗಳ+ಒಳ್ಗೆ+ಅವಿತು)(ವೀಕ್ಷಿಸುತ+ಇರ‍್ಪ)

ಆಟವಾಡುವುದಕ್ಕೋಸ್ಕರ ಈ ಪ್ರಪಂಚವನ್ನು ನಿರ್ಮಿಸಿ, ಆ ಆಟಕ್ಕೆ ತಾನೇ ಹುಟ್ಟು (ಮೂಲ) ಮತ್ತು ಮೊದಲು (ಆದಿ) ಎನ್ನಿಸುವಂತೆ, ಹಲವಾರು ಹೆಸರು ಮತ್ತು ಆಕಾರಗಳಿಂದ ಕೂಡಿದ, ಈ ದೇಹಗಳೆಂಬ ಚೀಲಗಳ ಒಳಗೆ ಬಚ್ಚಿಟ್ಟು (ಅವಿತು)ಕೊಂಡು ಪ್ರಪಂಚವನ್ನು ನೋಡುತ್ತಿರುವ (ವೀಕ್ಷಿಸುತ+ಇರ‍್ಪ), ಮತ್ತು ಅದನ್ನು ಕಾಪಾಡುತ್ತಿರುವ (ಪಾಲಕನ) ಪರಮಾತ್ಮನನ್ನು ಸ್ಮರಿಸಿಕೊಂಡು ನಮಸ್ಕರಿಸು.