Showing posts with label ಲೀಲೆಯೋ ಬರಿಲೀಲೆ ಸರ್ವತೋ ಲೀಲೆಯಿದು. Show all posts
Showing posts with label ಲೀಲೆಯೋ ಬರಿಲೀಲೆ ಸರ್ವತೋ ಲೀಲೆಯಿದು. Show all posts

Thursday, November 24, 2011

ಲೀಲೆಯೋ ಬರಿಲೀಲೆ ಸರ್ವತೋ ಲೀಲೆಯಿದು (110)

ಲೀಲೆಯೋ ಬರಿಲೀಲೆ ಸರ್ವತೋ ಲೀಲೆಯಿದು |
ಮೂಲಕರ್ತನ ಲೀಲೆ ಜೀವಿಗಳ ಲೀಲೆ ||
ಗೋಳುಗುದ್ದಾಟಗಳ ಬೆರೆತಪ್ಪ ವಿಧಿಲೀಲೆ |
ಕೋಲಾಹಲದ ಲೀಲೆ - ಮರುಳ ಮುನಿಯ || (೧೧೦)

ಇದು ಕೇವಲ ಒಂದು ವಿನೋದವಾದ ಆಟ. ಎಲ್ಲೆಲ್ಲಿಯೂ ಎಲ್ಲಾ ಕಡೆಗಳಲ್ಲಿಯೂ (ಸರ್ವತೋ) ಇರುವ ಆಟವಿದು. ಇದು ಆ ಪರಮಾತ್ಮನ ಆಟ. ಇಲ್ಲಿರುವ ಜೀವಿಗಳ ಆಟ. ದುಃಖ ಮತ್ತು ಕಲಹಗಳು ಬೆರೆತಿರುವ ವಿಧಿಯು ಆಡುವ ಆಟ. ಗಲಭೆ ಮತ್ತು ಗಲಾಟೆಗಳು (ಕೋಲಾಹಲ) ಕೂಡಿಕೊಂಡಿರುವ ಆಟ.