Showing posts with label ವನದ ಮಧ್ಯದಿ ನಿಂತು ನೋಡು ದೆಸೆದೆಸೆಯೊಳಂ. Show all posts
Showing posts with label ವನದ ಮಧ್ಯದಿ ನಿಂತು ನೋಡು ದೆಸೆದೆಸೆಯೊಳಂ. Show all posts

Tuesday, November 1, 2011

ವನದ ಮಧ್ಯದಿ ನಿಂತು ನೋಡು ದೆಸೆದೆಸೆಯೊಳಂ (94)


ವನದ ಮಧ್ಯದಿ ನಿಂತು ನೋಡು ದೆಸೆದೆಸೆಯೊಳಂ |
ದಿನದಿನದಿ ಗಿಡಗಿಡದಿ ಹೊಸಹೊಸತು ಚಿಗುರು ||
ಕ್ಷಣವಿಕ್ಷಣಮುಮಂತು ಪರಸತ್ತ್ವಮೆತ್ತಲುಂ |
ಜನುಮ ತಾಳುತ್ತಿಹುದು - ಮರುಳ ಮುನಿಯ || (೯೪)

(ಕ್ಷಣ+ವಿಕ್ಷಣಮುಂ+ಅಂತು)(ಪರಸತ್ತ್ವಂ+ಎತ್ತಲುಂ)

ಒಂದು ಕಾಡಿನ ಮಧ್ಯದಲ್ಲಿ ನಿಂತುಕೊಂಡು ನೋಡಿದರೆ, ದಿಕ್ಕು ದಿಕ್ಕುಗಳಲ್ಲೂ ಪ್ರತಿನಿತ್ಯವೂ ಹೊಸ ಹೊಸದಾದ ಚಿಗುರುಗಳು ಗಿಡಮರಗಳಲ್ಲಿ ಬಿಡುವುದನ್ನು ಕಾಣುತ್ತೀಯೆ. ಈ ರೀತಿಯಾಗಿ ಈ ಪ್ರಪಂಚದಲ್ಲಿ ಪ್ರತಿಕ್ಷಣವೂ ಮತ್ತು ಕ್ಷಣದ ಅಂಶ(ವಿಕ್ಷಣ)ಗಳಲ್ಲೂ ಪರಮಾತ್ಮನ ಸಾರವು ಎಲ್ಲೆಲ್ಲಿಯೂ ಜನುಮವೆತ್ತುತ್ತಿರುತ್ತದೆ.