Showing posts with label ವೈವಿಧ್ಯದಿಂ ಲೋಕವೈಕ್ಯದಿಂ ನಿರ್ಲೋಕ. Show all posts
Showing posts with label ವೈವಿಧ್ಯದಿಂ ಲೋಕವೈಕ್ಯದಿಂ ನಿರ್ಲೋಕ. Show all posts

Friday, December 2, 2011

ವೈವಿಧ್ಯದಿಂ ಲೋಕವೈಕ್ಯದಿಂ ನಿರ್ಲೋಕ (115)


ವೈವಿಧ್ಯದಿಂ ಲೋಕವೈಕ್ಯದಿಂ ನಿರ್ಲೋಕ |
ಧೀವಪುವಿಕಾಸದಲಿ ಗುಣವೃತ್ತಿಗಳಲಿ ||
ಜೀವಧರ್ಮದಲಿ ನಾನಾತ್ವವಾತ್ಮಧ್ಯಾನ |
ಕೈವಲ್ಯದಲಿ ಸಾಮ್ಯ - ಮರುಳ ಮುನಿಯ || (೧೧೫)

(ಲೋಕ+ಐಕ್ಯದಿಂ)(ನಾನಾತ್ವ+ಆತ್ಮಧ್ಯಾನ)

ವಿವಿಧತೆಯಿಂದ ಜಗತ್ತು. ಐಕ್ಯದಿಂದ ನಿರ್ಲೋಕ. ಬುದ್ಧಿಶಕ್ತಿ (ಧೀ) ಮತ್ತು ದೇಹ (ವಪು)ಗಳ ಅರಳುವಿಕೆ, ಸ್ವಭಾವ ಮತ್ತು ಉದ್ಯೋಗದಲ್ಲಿ, ಜೀವನವನ್ನು ನಡೆಸುವ ನ್ಯಾಯ, ನೀತಿಗಳಲ್ಲಿ ವಿಧವಿಧವಾದ ಆಕಾರಗಳಲ್ಲಿರುವ ಆತ್ಮದ ಬಗ್ಗೆ ಚಿಂತಿಸುವುದು. ಇವೆಲ್ಲವೂ ಮೋಕ್ಷ ಗಳಿಸುವಲ್ಲಿ ಸಮಾನ ಧರ್ಮದವೇ ಆಗಿರುತ್ತದೆ.