Showing posts with label ಶ್ರೀಮಂತನಾರ್ ತನ್ನ ಸಿರಿವಂತಿಕೆಯ ವಿಭವ. Show all posts
Showing posts with label ಶ್ರೀಮಂತನಾರ್ ತನ್ನ ಸಿರಿವಂತಿಕೆಯ ವಿಭವ. Show all posts

Tuesday, June 21, 2011

ಶ್ರೀಮಂತನಾರ್ ತನ್ನ ಸಿರಿವಂತಿಕೆಯ ವಿಭವ (28)

ಶ್ರೀಮಂತನಾರ್ ತನ್ನ ಸಿರಿವಂತಿಕೆಯ ವಿಭವ |
ಸಾಮರ್ಥ್ಯಗಳ ನೋಡಿ ಸಂತಸಿಸಲೆಂದೀ |
ಭೂಮ್ಯಾದಿಯಿಂ ಜಗದ್ದರ್ಪಣವ ರಚಿಸಿಹನೊ |
ಆ ಮಹಾತ್ಮಂಗೆ ನಮೊ - ಮರುಳ ಮುನಿಯ || (೨೮)

(ಶ್ರೀಮಂತನ್+ಆರ್)(ಸಂತಸಿಸಲ್+ಎಂದು+ಈ)(ಭೂಮಿ+ಅದಿಯಿಂ)(ಜಗತ್+ದರ್ಪಣವ)


 ಯಾವ ಐಶ್ವರ್ಯವಂತನು, ತನ್ನ ಶ್ರೀಮಂತಿಕೆಯ ವೈಭವ(ವಿಭವ)ಗಳ ಶಕ್ತಿ ಮತ್ತು ಕೆಚ್ಚುಗಳನ್ನು ಕಂಡು ಸಂತೋಷಿಸಲೆಂದು (ಸಂತಸಿಸಲೆಂದು) ಈ ಭೂಮಿ, ಇತ್ಯಾದಿಗಳಿಂದ ಈ ಪ್ರಪಂಚವೆಂಬ ಕನ್ನಡಿಯನ್ನು (ದರ್ಪಣ) ನಿರ್ಮಿಸಿದನೋ, ಆ ಮಹಾತ್ಮನಿಗೆ ನಮಸ್ಕಾರ.