Showing posts with label ಶ್ರೀಮಜ್ಜಗನ್ಮುಕುರ ವಿಸ್ತರದೊಳಾರ್ ತನ್ನ. Show all posts
Showing posts with label ಶ್ರೀಮಜ್ಜಗನ್ಮುಕುರ ವಿಸ್ತರದೊಳಾರ್ ತನ್ನ. Show all posts

Monday, May 2, 2011

ಶ್ರೀಮಜ್ಜಗನ್ಮುಕುರ ವಿಸ್ತರದೊಳಾರ್ ತನ್ನ (1)

ಶ್ರೀಮಜ್ಜಗನ್ಮುಕುರ ವಿಸ್ತರದೊಳಾರ್ ತನ್ನ |
ಮೈಮೆಯ ಪ್ರತಿಬಿಂಬ ಚಿತ್ರಗಳ ನೋಡು- ||
ತ್ತಾಮೋದಬಡುತಿಹನೊ ಆತನಡಿದಾವರೆಯ |
ನಾಮರಸುವಂ ಬಾರೊ -ಮರುಳಮುನಿಯ || (೧)

(ಶ್ರೀಮತ್+ಜಗತ್+ಮುಕುರ)(ವಿಸ್ತರದೊಳ್+ಆರ್)(ನೋಡುತ್ತ+ಆಮೋದ+ಪಡುತಿಹನೊ)
(ಆತನ+ಅಡಿದಾವರೆಯ)(ನಾಂ+ಅರಸುವಂ)

ಸಂಪದ್ಭರಿತವಾದ ಈ ಪ್ರಪಂಚವೆಂಬ ಕನ್ನಡಿಯ(ಮುಕುರ) ವಿಸ್ತಾರದಲ್ಲಿ (ವಿಸ್ತರದೊಳ್) ತನ್ನ ಮಹಿಮೆಯ (ಮೈಮೆ) ಪ್ರತಿಬಿಂಬಗಳ ಚಿತ್ರಗಳನ್ನು ನೋಡುತ್ತಾ ಸಂತೋಷಪಡುತ್ತಿರುವವನ (ಆಮೋದ), ಕಮಲದ ಹೂವಿನಂತಿರುವ ಪಾದಗಳನ್ನು (ಅಡಿದಾವರೆ) ನಾವು ಹುಡುಕೋಣ (ಅರಸು) ಬಾ.