Showing posts with label ಶ್ರುತಿಮತಿಗಳೆರಡುಮಂ (ದೃಢ) ಸಮನ್ವಯಗೊಳಿಸಿ. Show all posts
Showing posts with label ಶ್ರುತಿಮತಿಗಳೆರಡುಮಂ (ದೃಢ) ಸಮನ್ವಯಗೊಳಿಸಿ. Show all posts

Monday, November 24, 2014

ಶ್ರುತಿಮತಿಗಳೆರಡುಮಂ (ದೃಢ) ಸಮನ್ವಯಗೊಳಿಸಿ (700)

ಶ್ರುತಿಮತಿಗಳೆರಡುಮಂ (ದೃಢ) ಸಮನ್ವಯಗೊಳಿಸಿ |
ರತಿವಿರತಿಗಳುಭಯ ಸಮನ್ವಯವನರಿತು ||
ಸ್ವತೆಪರತೆಗಳನೆರಡನುಂ ಸಮನ್ವಯಗೊಳಿಸಿ |
ಮಿತಗತಿಯೆ ಹಿತಯೋಗ - ಮರುಳ ಮುನಿಯ || (೭೦೦)

(ಶ್ರುತಿಮತಿಗಳು+ಎರಡುಮಂ)(ರತಿವಿರತಿಗಳು+ಉಭಯ)(ಸಮನ್ವಯವನ್+ಅರಿತು)(ಸ್ವತೆಪರತೆಗಳನ್+ಎರಡನುಂ)

ವೇದ(ಶ್ರುತಿ) ಮತ್ತು ಬುದ್ಧಿಶಕ್ತಿಗಳೆರಡನ್ನೂ ನಿಶ್ಚಿತವಾಗಿ ಹೊಂದಾಣಿಕೆಗೊಳಿಸಿ, ಭೋಗ(ರತಿ) ಮತ್ತು ವೈರಾಗ್ಯ(ವಿರತಿ)ಗಳೆರಡೂ ತಮ್ಮ ಸಮನ್ವಯವನ್ನು ತಿಳಿದುಕೊಂಡು ತಾನು (ಸ್ವತೆ) ಮತ್ತು ಪರ(ಪರತೆ)ರು ಎಂಬ ಅಭಿಪ್ರಾಯಗಳನ್ನು ಹೊಂದಿಸಿಕೊಂಡು, ಪರಿಮಿತಿಯಲ್ಲಿ ನಡೆಯುವುದೇ ಎಲ್ಲರಿಗೂ ಒಳಿತನ್ನುಂಟುಮಾಡುವ ಯೋಗಮಾರ್ಗವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Coordinating the Vedic wisdom and your own wisdom,
Coordinating your love and dispassion,
Coordinating self interest with the good of other things,
Living a life of well-controlled conduct is the yoga of all welfare – Marula Muniya
(Translation from "Thus Sang Marula Muniya" by Sri. Narasimha Bhat)